ಸೋಮವಾರ, 8 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾಳಿಕೋಟೆ: ಸಂಪೂರ್ಣತಾ ಅಭಿಯಾನ ಉತ್ಸವ; ಸೌಲಭ್ಯ ಪರಿಶೀಲಿಸಿದ ನೀತಿಆಯೋಗದ ಅಧಿಕಾರಿ

Published 5 ಜುಲೈ 2024, 16:25 IST
Last Updated 5 ಜುಲೈ 2024, 16:25 IST
ಅಕ್ಷರ ಗಾತ್ರ

ತಾಳಿಕೋಟೆ: ತಾಲ್ಲೂಕಿನ ಹಿರೂರ ಗ್ರಾಮ ಪಂಚಾಯತಿಯ ತಮದಡ್ಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ‘ಮಹತ್ವಾಕಾಂಕ್ಷಿ ತಾಲ್ಲೂಕು ಕಾರ್ಯಕ್ರಮ’ದ ಅಡಿ ಸಂಪೂರ್ಣತಾ ಅಭಿಯಾನದ ಉತ್ಸವದ ಅಂಗವಾಗಿ ನೀತಿ ಆಯೋಗದ ಸಹಾಯಕ ವಿಭಾಗ (ಆಡಳಿತ) ಅಧಿಕಾರಿ ಬಬಿತಾ ಸೂರ್ಯವಂಶಿ ಶುಕ್ರವಾರ ಭೇಟಿ ನೀಡಿ ಮೂಲ ಸೌಲಭ್ಯ ವೀಕ್ಷೀಸಿದರು.

ತಮದಡ್ಡಿ ಗ್ರಾಮದ ಜೆ.ಜೆ.ಎಂ ಯೋಜನೆಯ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು. ಕೊಡಗಾನೂರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಬಿ.ಎಸ್.ಎನ್.ಎಲ್ ಸಂಪರ್ಕ ಪರಿಶೀಲಿಸಿದರು.

ತಾಳಿಕೋಟಿಯ ಪಶು ಆಸ್ಪತ್ರೆಗೆ ಭೇಟಿ ನೀಡಿ ಜಾನುವಾರುಗಳಿಗೆ ನೀಡುವ ಲಸಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಸಹಾಯಕ ಯೋಜನಾಧಿಕಾರಿ ಎ.ಬಿ. ಅಲ್ಲಾಪುರ, ತಹಶೀಲ್ದಾರ್‌ ಪ್ರೇಮಸಿಂಗ ಪವಾರ, ಟಿಎಚ್ಒ ಡಾ.ಸತೀಶ ತಿವಾರಿ, ಮಡಿಕೇಶ್ವರ ಹಾಗೂ ತಮದಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹೇಶ ಮಡಿವಾಳರ, ಆರ್‌ಡಬ್ಲ್ಯೂಎಸ್‌ನ ಎಇಇ ಹಿರೇಗೌಡರ, ಹಿರೂರ ಗ್ರಾಮ ಪಂಚಾಯಿತಿ ಪಿಡಿಒ ಸಿ.ಎಸ್.ಮಠ, ಕೊಡಗಾನೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನೀಲಕುಮಾರ ಕಿರಣಗಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಇದ್ದರು.

ತಾಳಿಕೋಟೆ:ತಾಲ್ಲೂಕಿನ ತಾಲೂಕಿನ ಹಿರೂರ ಗ್ರಾಮ ಪಂಚಾಯತಿಯ ತಮದಡ್ಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಮಹತ್ವಾಕಾಂಕ್ಷಿ ತಾಲ್ಲೂಕು ಕಾರ್ಯಮದಡಿ ಸಂಪೂರ್ಣತಾ ಅಭಿಯಾನದ ಉತ್ಸವದ ಅಂಗವಾಗಿ ನೀತಿ ಆಯೋಗದ ಸಹಾಯಕ ವಿಭಾಗ (ಆಡಳಿತ) ಅಧಿಕಾರಿಗಳಾದ ಬಬಿತಾ ಸೂರ್ಯವಂಶಿ ಅವರು  ಶುಕ್ರವಾರ ಭೇಟಿ ನೀಡಿದರು

ತಾಳಿಕೋಟೆ: ಮಹತ್ವಾಕಾಂಕ್ಷಿ ತಾಲ್ಲೂಕು ಕಾರ್ಯಮದಡಿ ಸಂಪೂರ್ಣತಾ ಅಭಿಯಾನದ ಉತ್ಸವದ ಅಂಗವಾಗಿ ನೀತಿ ಆಯೋಗದ ಸಹಾಯಕ ವಿಭಾಗ (ಆಡಳಿತ) ಅಧಿಕಾರಿಗಳಾದ ಬಬಿತಾ ಸೂರ್ಯವಂಶಿ ಅವರು ತಾಲ್ಲೂಕಿನ  ಹಿರೂರ ಗ್ರಾಮ ಪಂಚಾಯತಿಯ ತಮದಡ್ಡಿ ಗ್ರಾಮದ ಜೆ.ಜೆ.ಎಮ್  ಯೋಜನೆಯ ಕಾಮಗಾರಿಯ ಗುಣಮಟ್ಟವನ್ನು ಶುಕ್ರವಾರ  ಪರಿಶೀಲಿಸಿದರು  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT