ಮುಂಬೈ: ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದ ಕಿರಣ್ ಬೇಡಿ ಅವರ ಜೀವನ ಚರಿತ್ರೆಯ ಸಿನಿಮಾ ತಯಾರಾಗುತ್ತಿದೆ. ಕುಶಾಲ್ ಚಾವ್ಲಾ ಅವರು ಬರೆದು ನಿರ್ದೇಶಿಸುತ್ತಿರುವ ಚಿತ್ರವನ್ನು ಡ್ರೀಮ್ ಸ್ಲೇಟ್ ಪಿಕ್ಚರ್ ನಿರ್ಮಾಣ ಮಾಡುತ್ತಿದೆ.

ಚಿತ್ರಕ್ಕೆ ‘Bedi: The Name You Know. The Story You Don’t’ ಎಂದು ಹೆಸರಿಡಲಾಗಿದೆ.

ಕಿರಣ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಸವಾಲುಗಳು ಹಾಗೂ ವೃತ್ತಿ ಜೀವನದಲ್ಲಿ ಅವರನ್ನು ರೂಪಿಸಿದ ಅಚಲ ನಿರ್ಣಯದ ಕುರಿತಾದ ವಿಷಯಗಳನ್ನು ಕಥೆಯಾಗಿ ಹೆಣೆಯಲಾಗಿದೆ.

‘ಈ ಕಥೆ ಕೇವಲ ನನ್ನ ಕಥೆಯಲ್ಲ. ಇದು ಭಾರತೀಯ ಮಹಿಳೆಯ ಕಥೆ. ಭಾರತೀಯ ಪೋಷಕರೊಂದಿಗೆ ಭಾರತದಲ್ಲಿ ಬೆಳೆದ, ಭಾರತದಲ್ಲಿ ಅಧ್ಯಯನ ಮಾಡಿದ, ವೃತ್ತಿಜೀವನದುದ್ದಕ್ಕೂ ಭಾರತದ ಜನರಿಗಾಗಿ ಕೆಲಸ ಮಾಡಿದ ಭಾರತೀಯ ಮಹಿಳೆಯ ಕಥೆ. ನನ್ನ ಕಥೆಯು ಒಂಬತ್ತನೇ ವಯಸ್ಸಿನಲ್ಲಿ ಪ್ರಾರಂಭವಾಯಿತು’ ಎಂದು ಕಿರಣ್ ಹೇಳಿದ್ದಾರೆ.

ಕುಶಾಲ್ ಚಾವ್ಲಾ ಅವರು ಈ ಹಿಂದೆ ‘ಅನದರ್ ಟೈಮ್’ ಎನ್ನುವ ಕಿರುಚಿತ್ರ ಹಾಗೂ ‘ಲೇಬರ್ ಆಫ್ ಲವ್’ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.