ಶನಿವಾರ, 2 ಆಗಸ್ಟ್ 2025
×
ADVERTISEMENT
ಒಳನೋಟ: ಸೋರುವ ಕೊಠಡಿಯಲ್ಲೇ ಕಲಿಕೆ!
ಒಳನೋಟ: ಸೋರುವ ಕೊಠಡಿಯಲ್ಲೇ ಕಲಿಕೆ!
ಫಾಲೋ ಮಾಡಿ
Published 29 ಜೂನ್ 2025, 0:28 IST
Last Updated 29 ಜೂನ್ 2025, 0:28 IST
Comments
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಮೇದಿನಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿರುವುದು

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಮೇದಿನಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿರುವುದು

ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ತೆಗ್ಗಿನಕೇರಿ ಓಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ–9ರಲ್ಲಿ ಕೊಠಡಿಗಳ ಕೊರತೆಯಿಂದ ಗ್ರಾಮದೇವತೆ ಉಡಚಮ್ಮ ದೇವಸ್ಥಾನದಲ್ಲಿ ತರಗತಿ ನಡೆಸುತ್ತಿರುವ ದೃಶ್ಯ   –ಪ್ರಜಾವಾಣಿ ಚಿತ್ರ: ಅಬ್ದುಲ್‌ ರಜಾಕ್‌ ನದಾಫ್‌

ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ತೆಗ್ಗಿನಕೇರಿ ಓಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ–9ರಲ್ಲಿ ಕೊಠಡಿಗಳ ಕೊರತೆಯಿಂದ ಗ್ರಾಮದೇವತೆ ಉಡಚಮ್ಮ ದೇವಸ್ಥಾನದಲ್ಲಿ ತರಗತಿ ನಡೆಸುತ್ತಿರುವ ದೃಶ್ಯ   –ಪ್ರಜಾವಾಣಿ ಚಿತ್ರ: ಅಬ್ದುಲ್‌ ರಜಾಕ್‌ ನದಾಫ್‌  

ಕಲಬುರಗಿ ನಗರದ ಎಂ.ಎಸ್‌.ಕೆ. ಮಿಲ್‌ನ ಶಿಥಿಲ ಕಟ್ಟಡದಲ್ಲಿ ನಡೆಯುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ   –ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ಕಲಬುರಗಿ ನಗರದ ಎಂ.ಎಸ್‌.ಕೆ. ಮಿಲ್‌ನ ಶಿಥಿಲ ಕಟ್ಟಡದಲ್ಲಿ ನಡೆಯುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ   –ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಂದೀಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಹೆಂಚುಗಳು ಒಡೆದು ಹೋಗಿವೆ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಂದೀಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಹೆಂಚುಗಳು ಒಡೆದು ಹೋಗಿವೆ

ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ಸಮೀಪದ ಯಲೋದಹಳ್ಳಿಯ ಸರ್ಕಾರಿ ಶಾಲೆ ಜಲಾವೃತಗೊಂಡು ತರಗತಿ ಕೊಠಡಿಗಳಿಗೆ ಈಚೆಗೆ ನೀರು ನುಗ್ಗಿತ್ತು

ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ಸಮೀಪದ ಯಲೋದಹಳ್ಳಿಯ ಸರ್ಕಾರಿ ಶಾಲೆ ಜಲಾವೃತಗೊಂಡು ತರಗತಿ ಕೊಠಡಿಗಳಿಗೆ ಈಚೆಗೆ ನೀರು ನುಗ್ಗಿತ್ತು 

ಶಾಲಾ ಕಟ್ಟಡ ಶಿಥಿಲವಾಗಿದ್ದು ದುರಸ್ತಿ ಮಾಡುವಂತೆ ಮೇಲಧಿಕಾರಿಗಳಿಗೆ ಪ್ರತಿ ವರ್ಷ ಮನವಿ ಸಲ್ಲಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ. ಸೋರುವ ಕೋಣೆಗಳಲ್ಲಿ ಮಕ್ಕಳನ್ನು ಕೂಡಿಸಿ ಪಾಠ ಮಾಡುತ್ತಿದ್ದೇವೆ.
– ಹಣಮಂತ ರೇವಣ್ಣೂರ್, ಮುಖ್ಯ ಶಿಕ್ಷಕ (ಪ್ರಭಾರ), ಕಲಬುರಗಿ ನಗರದ ಎಂ.ಎಸ್‌.ಕೆ ಮಿಲ್‌ ಸರ್ಕಾರಿ ಶಾಲೆ
ಕಟ್ಟಡ ಶಿಥಿಲಗೊಂಡಿರುವುದರಿಂದ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಾರೆ. ವಿದ್ಯಾರ್ಥಿಗಳನ್ನು ಸೆಳೆಯಲು ಖಾಸಗಿ ಶಾಲೆಯವರ ಕ್ರಮಗಳನ್ನು ಅನುಸರಿಸಬೇಕು.
– ಎಂ. ಲಿಂಗರಾಜು, ಮುಖಂಡ, ಸರ್ಕಾರಿ ಕನ್ನಡ ಶಾಲೆ ಉಳಿಸಿ ಹೋರಾಟ ಸಮಿತಿ ದಾವಣಗೆರೆ
ಕೊಠಡಿ ಕುಸಿದು ಅನಾಹುತ ಸಂಭವಿಸಿದಲ್ಲಿ ನಾನೇ ಹೊಣೆಗಾರನಾಗಬೇಕಾಗುವುದರಿಂದ ಶಾಲೆಯ ಪಕ್ಕ ಗೌರಸಂದ್ರ ಮಾರಮ್ಮ ದೇವಸ್ಥಾನವಿದ್ದು ಅಲ್ಲಿಗೆ ಮಕ್ಕಳನ್ನು ಕೂರಿಸಿ ಪಾಠ ಮಾಡಲು ನಿರ್ಧರಿಸಿದ್ದೇನೆ.
– ರಾಮಚಂದ್ರಪ್ಪ, ಮುಖ್ಯಶಿಕ್ಷಕ, ಸಿದ್ದನೂರು ಲಂಬಾಣಿ ಹಟ್ಟಿಯ ಸರ್ಕಾರಿ ಶಾಲೆ
ಚಿತ್ರದುರ್ಗ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳು ಹಂದಿ ಗುಂಡಿಗಳಂತಿವೆ. ಜಿಲ್ಲೆಯ ಮಕ್ಕಳು ಉದ್ಧಾರವಾಗಬೇಕಾದರೆ ಶಾಲಾ ಕೊಠಡಿಗಳು ತುರ್ತಾಗಿ ದುರಸ್ತಿಯಾಗಬೇಕು.
– ಗೋವಿಂದ ಕಾರಜೋಳ, ಸಂಸದ (ಕೆಡಿಪಿ ಸಭೆಯಲ್ಲಿ ಹೇಳಿದ್ದು)
ಪೂರಕ ಮಾಹಿತಿ: ಚಂದ್ರಹಾಸ ಹಿರೇಮಳಲಿ, ಸಂಧ್ಯಾ ಹೆಗಡೆ, ಪ್ರಮೋದ ಕುಲಕರ್ಣಿ, ಹರಿಶಂಕರ್‌ ಆರ್‌., ಅನಿತಾ ಎಚ್‌., ಮಲ್ಲಿಕಾರ್ಜುನ ನಾಲವಾರ, ಇಮಾಮ್‌ಹುಸೇನ್‌ ಗೂಡುನವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT