ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಶುಭವಾಗಲಿದೆ
Published 12 ಸೆಪ್ಟೆಂಬರ್ 2024, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಾನಸಿಕ ಒತ್ತಡವು ಕಡಿಮೆಯಾಗದ ಹೊರತು ಇತರರೊಂದಿಗೆ ವಾಗ್ವಾದಕ್ಕೆ ಇಳಿಯಬೇಡಿ. ವಾಹನಗಳ ಬಿಡಿ ಭಾಗಗಳ ಮಾರಾಟಗಾರರಿಗೆ ಮತ್ತು ರಿಪೇರಿ ಮಾಡುವವರಿಗೆ ಬಿಡುವಿಲ್ಲದ ದಿನವಾಗುವುದು.
ವೃಷಭ
ಅನಿವಾರ್ಯ ಕಾರಣದಿಂದಾಗಿ ಕುಟುಂಬದವರೊಂದಿಗೆ ಕಳೆಯಬೇಕೆಂದುಕೊಂಡ ಸಮಯವನ್ನು ತಪ್ಪಿಸಿಕೊಳ್ಳುವಿರಿ. ವಾದ-ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ. ಹೆಂಡತಿಯ ಆರೋಗ್ಯದಲ್ಲಿ ಸುಧಾರಣೆ.
ಮಿಥುನ
ತೆಗೆದುಕೊಂಡ ದಿಟ್ಟ ಹೆಜ್ಜೆಗಳು ನಿಮ್ಮ ಯಶಸ್ಸಿನ ಕಡೆಗೆ ಕರೆದುಕೊಂಡು ಹೋಗುವುದು. ವ್ಯವಹಾರದಲ್ಲಿ ಗೆಳೆಯನ ಮಾತುಗಳನ್ನು ಕೇಳಿದರೆ ಲಾಭವಾಗುವುದು. ಧನಲಾಭವನ್ನು ತರಲಿದೆ.
ಕರ್ಕಾಟಕ
ರಚನಾತ್ಮಕ ಕಾರ್ಯಕ್ರಮಗಳ ಕುರಿತು ದೂರದರ್ಶನ ಮಾಧ್ಯಮದವರಿಂದ ಮೆಚ್ಚುಗೆಯ ಮಾತು ಕೇಳಲಿದ್ದೀರಿ. ಶಿಕ್ಷಕ ವರ್ಗದವರಿಗೆ ಹೆಚ್ಚಿನ ಜವಾಬ್ದಾರಿಯುತ ಕೆಲಸಗಳು ಬರಲಿವೆ. ಆದಾಯವಿರುವುದು.
ಸಿಂಹ
ಮನೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸುವುದಕ್ಕಾಗಿ ಹಣ ಖರ್ಚು ಮಾಡಬೇಕಾಗಿ ಬರುವುದು. ಕೆಲಸಗಳಿಗೆ ಇಂದು ಪ್ರಭಾವಿ ವ್ಯಕ್ತಿಗಳ ಸಹಾಯವು ದೊರಕುವುದು.
ಕನ್ಯಾ
ಜೀವನದ ಎಲ್ಲ ರೀತಿಯ ಕ್ಷಣಗಳನ್ನು ಅನುಭವಿಸಿದ ನಿಮಗೆ ಇತರರಿಗೆ ಜೀವನವನ್ನು ಹೇಳಿಕೊಡುವುದು ಕಷ್ಟವಾಗುವುದಿಲ್ಲ. ವ್ಯವಹಾರದಲ್ಲಿ ಮಧ್ಯಮ ಮಟ್ಟದ ಲಾಭ ಹೊಂದುವಿರಿ.
ತುಲಾ
ಮುಂಜಾಗರೂಕತೆ ಇಲ್ಲದೇ ಮಾಡಿದ ಕೆಲಸಗಳು ಅಪಾಯವನ್ನು ತಂದೊಡ್ಡಬಹುದು. ಸ್ವಂತ ಮನೆಯ ಕನಸು ನನಸು ಮಾಡುವ ದಾರಿ ಕಾಣುವುದು. ಸಂಸಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
ವೃಶ್ಚಿಕ
ಸ್ಥಿರ ಅಥವಾ ಚರ ಆಸ್ತಿಯನ್ನು ಮಾರಲು ಯೋಚನೆ ನಡೆಸಿದ್ದಲ್ಲಿ ಹಿರಿಯರಿಂದ ಸರಿಯಾದ ಮಾರ್ಗದರ್ಶನ ಕೇಳಿ ಪಡೆದುಕೊಳ್ಳಿ. ಎದುರು ನೋಡುತ್ತಿದ್ದ ಜೀವನವನ್ನು ಅನುಭವಿಸುವ ಸಮಯ ಹತ್ತಿರವಿದೆ.
ಧನು
ದೊರೆತಿರುವ ಖ್ಯಾತಿ ಉಳಿಸಿಕೊಳ್ಳುವತ್ತ ಗಮನ ಹರಿಸುವುದು ಉತ್ತಮ. ಹೊಸ ಕನಸು ಹಾಗೂ ಉತ್ಸಾಹದಿಂದ ಕೆಲಸವನ್ನು ಶುರು ಮಾಡುವಿರಿ. ಮನೆಯ ಹೆಣ್ಣು ಮಗಳಿಗೆ ಮದುವೆಗೆ ಹುಡುಗ ಸಿಗುವ ಸಾಧ್ಯತೆ.
ಮಕರ
ಎಲ್ಲಾ ಆಲೋಚನೆಗಳಿಗೂ ಸಂಗಾತಿಯ ಸಂಪೂರ್ಣ ಬೆಂಬಲ ಇರುವುದು. ಆಹಾರದಿಂದ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಶುಭವಾಗುವುದು.
ಕುಂಭ
ಅಧಿಕ ಒತ್ತಡದ ಕೆಲಸದ ನಡುವೆಯೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಜವಳಿ ವ್ಯಾಪಾರದ ಅಭಿವೃದ್ಧಿಗೆ ಸಹಾಯವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಬಿಳಿ ಬಣ್ಣ ಶುಭವನ್ನು ಉಂಟುಮಾಡಲಿದೆ.
ಮೀನ
ತಾಯಿಯ ಆರೋಗ್ಯ ಹದಗೆಟ್ಟಿದ್ದಲ್ಲಿ ಹಂತ ಹಂತವಾಗಿ ಚೇತರಿಕೆ ಕಾಣುವುದು. ಪ್ರೀತಿಪಾತ್ರರ ಜೊತೆ ಸಂತಸದ ಸಮಯ ಕಳೆಯುವಿರಿ. ಸಾಲ ಕೊಡುವಂಥ ವ್ಯವಹಾರಗಳು ಬೇಡ. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.
ADVERTISEMENT
ADVERTISEMENT