ಕಠ್ಮಂಡು: ಇಸ್ರೇಲ್ನ ದಕ್ಷಿಣ ಪ್ರಾಂತ್ಯದ ನಗರಗಳ ಮೇಲೆ ಹಮಾಸ್ ಬಂಡುಕೋರರು ನಡೆಸಿದ ರಾಕೆಟ್ ದಾಳಿಯಲ್ಲಿ ನೇಪಾಳದ 10 ನಾಗರಿಕರು ಸಾವಿಗೀಡಾಗಿದ್ದಾರೆ. ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ನೇಪಾಳದ ವಿದೇಶಾಂಗ ಇಲಾಖೆಯು ಸೋಮವಾರ ತಿಳಿಸಿದೆ.

ಕಿಬ್ಬುಡ್ಜ್ ಅಲ್ಯುಮಿಮ್ನ ಗದ್ದೆಯೊಂದರಲ್ಲಿ 17 ಮಂದಿ ನೇಪಾಳಿ ನಾಗರಿಕರು ಕೆಲಸ ಮಾಡುತ್ತಿದ್ದರು. ಈ ಪೈಕಿ ಇಬ್ಬರು ಸುರಕ್ಷಿತವಾಗಿ ತಪ್ಪಿಸಿಕೊಂಡಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ. ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಹೇಳಿದೆ.

ಹಮಾಸ್ನಿಂದ ದಾಳಿಗೊಳಗಾದ ಸ್ಥಳದಲ್ಲಿ 10 ನೇಪಾಳಿ ನಾಗರಿಕರು ಸಾವಿಗೀಡಾದ ದುಃಖದ ಸುದ್ದಿ ನಮಗೆ ತಿಳಿದುಬಂತು ಎಂದು ಜೆರುಸಲೇಮ್ನಲ್ಲಿರುವ ನೇಪಾಳದ ರಾಯಭಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

‘ಘಟನೆಯಲ್ಲಿ ಸಾವಿಗೀಡಾದವರ ಗುರುತು ಪತ್ತೆಗೆ ನಾವು ಪ್ರಯತ್ನಿಸುತ್ತಿದ್ದೇವೆ. ನಾಪತ್ತೆಯಾದವರ ಪತ್ತೆಗೂ ಹುಡುಕಾಟ ನಡೆಸುತ್ತಿದ್ದೇವೆ. ಮೃತರ ಗುರುತು ಪತ್ತೆಯಾದ ಕೂಡಲೇ ಅವರ ದೇಹವನ್ನು ನೇಪಾಳಕ್ಕೆ ಕರೆತರಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ದಾಳಿಯಲ್ಲಿ ಗಾಯಗೊಂಡವರ ಚಿಕಿತ್ಸೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಇಸ್ರೇಲ್ ಸರ್ಕಾರವನ್ನು ನೇಪಾಳ ಸರ್ಕಾರ ಕೋರಿದೆ. ಇಸ್ರೇಲ್ ಸರ್ಕಾರ ಹಾಗೂ ಟೆಲ್ಅವಿವ್ನಲ್ಲಿರುವ ರಾಯಭಾರ ಕಚೇರಿಯೊಂದಿಗೆ ವಿದೇಶಾಂಗ ಇಲಾಖೆಯ ಸಂಪರ್ಕದಲ್ಲಿದ್ದು, ಇಸ್ರೇಲ್ನಿಂದ ನೇಪಾಳಿ ನಾಗರಿಕನ್ನು ಕರೆತರುವ ಪ್ರಯತ್ನ ಮಾಡುತ್ತಿದೆ.

ಈ ಸಂಘರ್ಷದಿಂದಾಗಿ ಉಭಯ ಕಡೆಗಳಿಂದ ಸಾವಿರಾರು ಮಂದಿ ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.