ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾ ಮೇಲೆ ದಿಗ್ಬಂಧನ: ಜಿ7 ರಾಷ್ಟ್ರಗಳ ಎಚ್ಚರಿಕೆ

Published : 14 ಫೆಬ್ರುವರಿ 2022, 12:22 IST
ಫಾಲೋ ಮಾಡಿ
Comments

ಬರ್ಲಿನ್‌: ಉಕ್ರೇನ್‌ ಮೇಲೆ ಸೇನಾ ದಾಳಿ ನಡೆಸಲು ಮುಂದಾದರೆ ರಷ್ಯಾ ವಿರುದ್ಧ ದಿಗ್ಬಂಧನ ವಿಧಿಸಲು ವಿವಿಧ ರಾಷ್ಟ್ರಗಳು ಸಜ್ಜಾಗಿವೆ. ಹಾಗೇನಾದರೂ ಆದರೆ ಅದು ರಷ್ಯಾದ ಆರ್ಥಿಕತೆ ಮೇಲೆ ತಕ್ಷಣವೇ ಭಾರಿ ಪರಿಣಾಮ ಬೀರಲಿದೆ ಎಂದು ಜಿ7 ರಾಷ್ಟ್ರಗಳು ಮಾಸ್ಕೊಗೆ ಸೋಮವಾರ ಎಚ್ಚರಿಕೆ ನೀಡಿವೆ.

‘ಉದ್ರಿಕ್ತ ಪರಿಸ್ಥಿತಿಯನ್ನು ನಿವಾರಿಸಲು ಬೆಂಬಲ ನೀಡಬೇಕು ಎಂಬುದು ನಮ್ಮ ಈಗಿನ ಆದ್ಯತೆ’ ಎಂದು ಜಿ7 ಸದಸ್ಯತ್ವ ಹೊಂದಿದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಆರ್ಥಿಕ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೆ ರಷ್ಯಾ ಉಕ್ರೇನ್‌ ಮೇಲೆ ದಾಳಿ ನಡೆಸಿದರೆ ಇತರ ರಾಷ್ಟ್ರಗಳು ಒಗ್ಗೂಡಿ ಆರ್ಥಿಕ ದಿಗ್ಬಂಧನ ವಿಧಿಸಲು ತಯಾರಿ ನಡೆಸಿವೆ. ಇದು ರಷ್ಯಾದ ಆರ್ಥಿಕತೆಗೆ ಹೊಡೆತ ನೀಡಲಿದೆ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT