ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ಟೆನಿಸ್‌ ಲೀಗ್‌ಗೆ ನಗಾಲ್

Published : 4 ಅಕ್ಟೋಬರ್ 2024, 23:25 IST
Last Updated : 4 ಅಕ್ಟೋಬರ್ 2024, 23:25 IST
ಫಾಲೋ ಮಾಡಿ
Comments

ಅಬುಧಾಬಿ: ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅವರು ಮುಂಬರುವ ವಿಶ್ವ ಟೆನಿಸ್‌ ಲೀಗ್‌ನಲ್ಲಿ ಭಾಗಿಯಾಗಲಿದ್ದಾರೆ. ಇದರಲ್ಲಿ ವಿಶ್ವದ ಐದನೇ ಕ್ರಮಾಂಕದ ಆಟಗಾರ ಡೇನಿಯಲ್ ಮೆಡ್ವೆಡೇವ್, ಮಹಿಳಾ ವಿಭಾಗದಲ್ಲಿ ಅಮೆರಿಕ ಓಪನ್ ಚಾಂಪಿಯನ್ ಅರಿನಾ ಸಬಲೆಂಕಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ಶುಕ್ರವಾರ ತಿಳಿಸಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 83ನೇ ಸ್ಥಾನದಲ್ಲಿರುವ ನಗಾಲ್ ಯಾವ ತಂಡಕ್ಕೆ ಆಡುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಇಲ್ಲಿನ ಇತಿಹಾದ್ ಅರೇನಾದಲ್ಲಿ ಡಿಸೆಂಬರ್‌ 19ರಿಂದ 22ರವರೆಗೆ ಈ ಟೂರ್ನಿ ನಿಗದಿಯಾಗಿದೆ.

ಈ ಲೀಗ್‌ನಲ್ಲಿ ಇಬ್ಬರು ಒಲಿಂಪಿಕ್ ಚಿನ್ನದ ಪದಕ ವಿಜೇತರು, ಐವರು ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್ನರು, ಪುರುಷರ ವಿಭಾಗದ ಅಗ್ರ 12 ಆಟಗಾರರಲ್ಲಿ ಆರು ಮಂದಿ, ಮಹಿಳಾ ವಿಭಾಗದ 10 ಅಗ್ರಗಣ್ಯ ಆಟಗಾರ್ತಿಯರಲ್ಲಿ ಆರು ಮಂದಿ ಭಾಗಿಯಾಗಲಿದ್ದಾರೆ. ವಿಶ್ವದ ಅಗ್ರಮಾನ್ಯ ಆಟಗಾರ್ತಿ ಇಗಾ ಶ್ವಾಂಟೆಕ್ ಅವರೂ ಸಹ ಇದರಲ್ಲಿ ಒಳಗೊಂಡಿದ್ದಾರೆ. ಹಾಲಿ ವಿಂಬಲ್ಡನ್ ಚಾಂಪಿಯನ್ ಬಾರ್ಬೊರಾ ಕ್ರಾಜಿಕೋವಾ ಮತ್ತು ಒಲಿಂಪಿಕ್ಸ್‌ನಲ್ಲಿ ಡಬಲ್ಸ್‌ ಸ್ವರ್ಣ ವಿಜೇತೆ ಜಾಸ್ಮಿನ್ ಪಾವೊಲಿನಿ ಲೀಗ್‌ಗೆ ಪದಾರ್ಪೆ ಮಾಡಲಿದ್ದಾರೆ.

ಮೆಡ್ವೆಡೇವ್ ಮತ್ತು ವಿಶ್ವ ಕ್ರಮಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಆಂಡ್ರೆ ರುಬ್ಲೇವ್ ಅವರು ಡಬ್ಲ್ಯುಟಿಎಲ್‌ 2023ರ ವಿಜೇತ ತಂಡ ಈಗಲ್ಸ್‌ನ ಭಾಗವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT