ಮೂವತ್ತು ವರ್ಷ ಪ್ರಜಾವಾಣಿ ಸಂಪಾದಕೀಯ ವಿಭಾಗದಲ್ಲಿ ದುಡಿದಿರುವ ಪಿ. ಶ್ರೀಧರ ನಾಯಕ್ ಅವರು ತಮ್ಮ ನೆನಪಿನಾಳದಿಂದ ಹಲವು ವಾಸ್ತವಗಳನ್ನು ದಾಖಲಿಸಿದ್ದಾರೆ. ತಮ್ಮ ಕಾರ್ಯಾವಧಿಯಲ್ಲಿ ಹಾಸನ ಹಾಗೂ ಕಲಬುರ್ಗಿಯಲ್ಲಿ ಕಾರ್ಯನಿರ್ವಹಿಸಿದ ಅನುಭವಗಳನ್ನು ಸೊಗಸಾಗಿ ದಾಖಲಿಸಿದ್ದಾರೆ.

ಕೆಲವು ಲಘುಪ್ರಬಂಧದ ಧಾಟಿಯಲ್ಲಿದ್ದರೆ, ಕೆಲವು ವರದಿ ಅಥವಾ ಪುರವಣಿಗಾಗಿ ಬರೆದ ಬರೆಹಗಳ ಸ್ವರೂಪದಲ್ಲಿವೆ. ಪ್ರತಿ ಜಿಲ್ಲೆಯ ಇತಿಹಾಸ ಹಾಗೂ ಸಾಂಸ್ಕೃತಿಕ ಆಯಾಮವನ್ನು ಹೊರಗಿನ ಜಿಲ್ಲೆಯ ವ್ಯಕ್ತಿಯ ನೋಟ, ಕುತೂಹಲ ಮತ್ತು ದಾಖಲಿಸುವ ಕಾತರ ಈ ವರದಿಗಳಲ್ಲಿ ಎದ್ದು ಕಾಣುತ್ತದೆ.

ಪತ್ರಿಕೋದ್ಯಮದ ಹಲವು ಮಜಲುಗಳು, ಪತ್ರಿಕೆ ಪ್ರಕಟವಾಗಿ ಮರುದಿನ ಸಂಜೆಯಿಂದ ಮಧ್ಯಾಹ್ನಕ್ಕೆ ಮತ್ತು ಅಂದೇ ಬೆಳಗಿನ ಹೊತ್ತಿಗೆ ತಲುಪುವ ವರೆಗೆ ಬದಲಾದ ತಂತ್ರಜ್ಞಾನಗಳ ಕುರಿತೂ ಇಲ್ಲಿ ಮಾಹಿತಿ ಇದೆ. ಗೂಗಲ್, ವಿಕಿಪಿಡಿಯಾ ಇಲ್ಲದ ಹೊತ್ತಿನಲ್ಲಿ ಒಬ್ಬ ವರದಿಗಾರನ ಅಧ್ಯಯನಶೀಲ ಮತ್ತು ಕ್ರಿಯಾಶೀಲ ಗುಣಗಳು ಹೇಗಿರಬೇಕು ಎಂಬುದು ಪುಸ್ತಕ ಓದುತ್ತ ಹೋದಂತೆ ಮನವರಿಕೆಯಾಗುತ್ತದೆ.

ಬರೆಯಬಾರದ ಸಂಗತಿಗಳಿವು ಅಲ್ಲ ಎಂದು ಹೇಳಿರುವ ಉಡುಪಿ ಮೂಲದ ಶ್ರೀಧರ್ ನಾಯಕ್, ಮಲೆನಾಡಿನ ಹಾಸನ ಜಿಲ್ಲೆ ಹಾಗೂ ಬಿರುಬೇಸಿಗೆಯ ಬಯಲುಸೀಮೆಯ ಕಲಬುರ್ಗಿಯಲ್ಲಿ ಕಂಡ ಬದುಕನ್ನು ಆಪ್ತವಾಗಿ ದಾಖಲಿಸಿದ್ದಾರೆ. ಮಾನವೀಯ ಸ್ಪರ್ಶದೊಂದಿಗಿರುವ ಪತ್ರಿಕೋದ್ಯಮವನ್ನು ಅರ್ಥ ಮಾಡಿಕೊಳ್ಳಲು ಈ ಪುಸ್ತಕ ಸಹಾಯಕವಾಗಿದೆ. ಜಿಲ್ಲಾ ವರದಿಗಾರರಿಗೆ, ವಿದ್ಯಾರ್ಥಿ ಪತ್ರಕರ್ತರಿಗೆ ಮಾರ್ಗದರ್ಶಿಯಂತೆಯೂ ಇದೆ.

ಹೇಳದೇ ಇದ್ದ ವಾಸ್ತವಗಳು

ಲೇ: ಪಿ. ಶ್ರೀಧರ ನಾಯಕ್

ಗೀತಾಂಜಲಿ ಪ್ರಕಾಶನ

ಸಂ: 9740066842

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.