ಗಣಿತ ಅಧ್ಯಾಪಕರಾದ ಗುರುರಾಜ್ ಎಸ್. ದಾವಣಗೆರೆ ಅವರಿಗೆ ಹೊಸಕಾಲದ ಬಹುಮುಖಿ ವಿಷಯಗಳ ಮೇಲೆ ಇನ್ನಿಲ್ಲದ ಆಸಕ್ತಿ. ಅದರಲ್ಲೂ ತಂತ್ರಜ್ಞಾನ ಹಾಗೂ ವಿಜ್ಞಾನವನ್ನು ಅವರು ಕಣ್ಣುಗಳನ್ನು ಅಗಲಿಸಿ ನೋಡುವವರ ಪೈಕಿ. ವಿಜ್ಞಾನ, ತಂತ್ರಜ್ಞಾನ ವಿಸ್ತರಣೆಗೊಳ್ಳುತ್ತಾ, ಬದುಕಿನ ಭಾಗವೇ ಆಗುತ್ತಾ, ಹೊಸತೇನೋ ಸವಾಲು ಬಂತಿದೋ ಎನ್ನುವಂತೆ ಮಾಡುತ್ತಲೇ ಇವೆ. ಇಂತಹ ಸಂಗತಿಗಳ ಮಾಹಿತಿ ಕೊಡುವುದರ ಜೊತೆಗೆ ಅವನ್ನು 360 ಡಿಗ್ರಿಯಲ್ಲಿ ನೋಡುವ ಕ್ರಮವೊಂದು ಇರುವುದು ಉತ್ತಮ. ಅಂತಹ ಯತ್ನವನ್ನು ಗುರುರಾಜ್ ಮಾಡಿದ್ದಾರೆ. ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾದ ಮುಖಪುಟ ಲೇಖನಗಳನ್ನು ಒಳಗೊಂಡ ಮಾಹಿತಿಪೂರ್ಣ ಸಂಕಲನ ‘ವಿರಾಟ್ ವಿಜ್ಞಾನ’.

ಥ್ರೀಡಿ, ಬಾಹ್ಯಾಕಾಶ, ಯಾಂತ್ರಿಕ ಬುದ್ಧಿಮತ್ತೆ ಹೀಗೆ ಹಲವು ಕ್ಷೇತ್ರಗಳ ಸೋಜಿಗಪಡುವಂತಹ ಮಾಹಿತಿಯನ್ನು ಅವರು ಒಟ್ಟುಮಾಡಿ ಕೊಟ್ಟಿದ್ದಾರೆ. ‘ಸೈನ್ಸ್–ಟೆಕ್ನಾಲಜಿಯ ತೀರ ಇತ್ತೀಚಿನ ಆಗುಹೋಗುಗಳನ್ನು ಎಲ್ಲರಿಗೂ ಅರ್ಥವಾಗುವಂತೆ ಬರೆಯುವವರಲ್ಲಿ ಅಗ್ರಗಣ್ಯರು’ ಎಂದು ಗುರುರಾಜ್ ಅವರನ್ನು ನಾಗೇಶ ಹೆಗಡೆ ತಮ್ಮ ಬೆನ್ನುಡಿಯಲ್ಲಿ ಗುರುತಿಸಿದ್ದಾರೆ. ಕೃತಿಯ ಸಾರಕ್ಕೆ ಅವರ ಈ ನುಡಿ ಸರ್ಟಿಫಿಕೇಟ್ ಇದ್ದಂತೆ.

ಕೃ: ವಿರಾಟ್ ವಿಜ್ಞಾನ

ಲೇ: ಗುರುರಾಜ್ ಎಸ್. ದಾವಣಗೆರೆ

ಪ್ರ: ವಸಿಷ್ಠ ಬುಕ್ಸ್ ಬೆಂಗಳೂರು

ಪು: 156

ದ: ₹ 160

ಸಂ: 9901067738

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.