ನಗರವೂ ಅಲ್ಲದ ಹಳ್ಳಿಯೂ ಆಗಿರದ ‘ಡಂಕಲ್ ಪೇಟೆ’ ಎಂಬ ಕಾಲ್ಪನಿಕ ಪಟ್ಟಣದಲ್ಲಿ ನಡೆಯುವ ಕಥೆಗಳನ್ನು ವೀರೇಂದ್ರ ರಾವಿಹಾಳ್ ಅವರ ‘ಡಂಕಲ್ ಪೇಟೆ’ ಒಳಗೊಂಡಿದೆ. ಇದು ಅವರ ಮೊದಲ ಕಥಾ ಸಂಕಲನ. ಇದರಲ್ಲಿ ಒಟ್ಟು ಆರು ಕಥೆಗಳಿವೆ. ಇಲ್ಲಿನ ಎಲ್ಲಾ ಕಥೆಗಳು ಒಂದೇ ಪರಿಸರದಲ್ಲಿ ಹುಟ್ಟಿಕೊಂಡರೂ, ಕಥಾವಸ್ತುವಿನಲ್ಲಿ ವೈವಿಧ್ಯತೆಯಿಂದ ಕೂಡಿವೆ. ನಿರೂಪಣೆ ಭಿನ್ನವಾಗಿದೆ.

‘ದೊರೆ’ ಕಥೆಯಲ್ಲಿ ದೊರೆ ಎನ್ನುವ ತುಂಟ ಬಾಲಕನನ್ನು ಕೇಂದ್ರವಾಗಿಟ್ಟುಕೊಂಡು, ಲಾಕ್ಡೌನ್ ವೇಳೆ ವಲಸೆ ಕಾರ್ಮಿಕರು ಅನುಭವಿಸಿದ ತೊಂದರೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ‘ಶ್ವಾನಶೂಲ’ ಕಥೆಯಲ್ಲಿ ಕಾಡಿ ಎನ್ನುವ ಸಾಮಾನ್ಯ ನಾಯಿಯೊಂದು ತಾನು ಬೆಳೆಯುತ್ತಾ ಬೆಳೆಯುತ್ತಾ ಆ ಊರಿನ ಎಲ್ಲಾ ಸ್ಥಿತ್ಯಂತರಕ್ಕೆ ಮೂಕಸಾಕ್ಷಿಯಾಗುವುದನ್ನು ಕಾಣಬಹುದು. ‘ಉತ್ಖನನ’ ಕಥೆಯಲ್ಲಿ ಕಾಲದ ಜೊತೆಗಿನ ಬದಲಾವಣೆ ಹಾಗೂ ಮನುಷ್ಯನ ಮನಸ್ಥಿತಿಯು ಬಿಂಬಿತವಾಗಿದೆ. ‘ಕಲ್ಯಾಣಿ’ ಕಥೆಯು ತುಳಿತಕ್ಕೆ ಒಳಗಾದವರು, ತಮ್ಮವರಿಂದಲೇ ಅನುಭವಿಸುವ ಸಂಕಷ್ಟಗಳನ್ನು ಕಟ್ಟಿಕೊಡುವ ದುರಂತ ಕಥೆಯಾಗಿದೆ. ‘ಹಾವು ಏಣಿ’ಯಲ್ಲಿ ಹಣದ ಲಾಲಸೆಯು ಮನುಷ್ಯನನ್ನು ಹೇಗೆಲ್ಲಾ ಬದಲಾಯಿಸಿ ಬಿಡುತ್ತದೆ ಎನ್ನುವುದನ್ನು ಕಾಣಬಹುದು. ‘ಊರ ಮುಂದಲ ಹೊಲ’ ಕಥೆಯು ವಲಸಿಗರಾಗಿ ಈ ನೆಲಕ್ಕೆ ಬಂದು, ನಂತರ ಇಲ್ಲಿನ ರಾಜಕೀಯದ ಹಿಡಿತ ಹೊಂದಿರುವವರ ಕಣ್ಣಿಗೆ ಬಿದ್ದ ಸ್ಥಳೀಯನೊಬ್ಬನ ಹೊಲವನ್ನು ಅವನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವ ಕಥಾವಸ್ತುವಿನ ಮೂಲಕ ಆ ಭಾಗದ ರಾಜಕೀಯ ಸ್ಥಿತ್ಯಂತರವನ್ನು ಬಿಚ್ಚಿಡುತ್ತದೆ.

ಬಳ್ಳಾರಿ ಭಾಗದ ಜನಜೀವನ, ಭಾಷೆ, ಸಂಸ್ಕೃತಿ ಹಾಗೂ ಜಲ್ವಂತ ಸಮಸ್ಯೆಗಳನ್ನು ಡಂಕಲ್ ಪೇಟೆಯ ರೂಪಕದ ಮೂಲಕ ಕತೆಗಾರರು ಅನಾವರಣಗೊಳಿಸಿದ್ದಾರೆ. ಇಡೀ ಕಥಾ ಸಂಕಲನದಲ್ಲಿ ಬಳ್ಳಾರಿಯ ಭಾಷಾ ಸೊಗಡನ್ನು ಗಮನಿಸಬಹುದು. ಇದು ಕಥೆಗಳನ್ನು ಓದುಗರಿಗೆ ಮತ್ತಷ್ಟು ಆಪ್ತವಾಗಿಸುತ್ತದೆ. ವ್ಯಂಗ್ಯ ಮತ್ತು ವಿಡಂಬನೆಯ ಮೂಲಕ ಬಡತನ, ರಾಜಕೀಯ, ಹಳ್ಳಿ ಜನರ ಮುಗ್ದತೆ, ಮನುಷ್ಯ ಸಂಬಂಧಗಳು, ಸ್ವಭಾವಗಳನ್ನು ಹಾಗೂ ಕೋಮು ವಿಷಯಗಳನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು. ಕಾಡ ಸಿದ್ದೇಶ್ವರ, ಡಂಕಲ್ ಗುಡ್ಡ, ಸುಂಕ್ಲಮ್ಮ ಮುಂತಾದ ಸಾಮಾಜಿಕ ಸಂಗತಿಗಳು ಜೀವಂತ ಪಾತ್ರಗಳಾಗಿ ಈ ಕಥೆಗಳಲ್ಲಿವೆ. ಇವು ಬರೀ ಕಥೆಗಳಂತೆ ಕಾಣದೇ, ನೈಜ ಘಟನೆಗಳ ಚಿತ್ರಣದಂತೆ ಕಾಣುತ್ತವೆ.

ಡಂಕಲ್ ಪೇಟೆ

ಲೇ: ವೀರೇಂದ್ರ ರಾವಿಹಾಳ್

ಪ್ರ.: ವಿಜಯ ಬುಕ್ಸ್ ಬಳ್ಳಾರಿ

ಸಂ: 9449622737

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.