ವೈರಸ್ಸುಗಳೆಂದರೇನೆ ರೋಗಕಾರಕಗಳು ಎಂಬ ನಂಬಿಕೆಯನ್ನು ಹೊಡೆದು ಹಾಕುವ ಉದ್ದೇಶದಿಂದಲೇ ರಚಿತವಾದ ಈ ಕೃತಿಯನ್ನು ಓದಿದಾಗ ನಮ್ಮ ಅರಿವಿನ ಹರವು ವಿಸ್ತಾರಗೊಳ್ಳುತ್ತದೆ. ಎಲ್ಲ ಅನಾರೋಗ್ಯಕ್ಕೂ ವೈರಸ್ಸಿನ ಸೋಂಕುಗಳೇ ಕಾರಣ ಎಂಬ ದೂರು ಶಿಥಿಲಗೊಳ್ಳುತ್ತದೆ. ನಮ್ಮ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳುವಲ್ಲಿ, ನಿಸರ್ಗದ ಸಮತೋಲನವನ್ನು ನಿರ್ವಹಿಸುವಲ್ಲಿ ವೈರಸ್ಸುಗಳು ಹೇಗೆ ವರ್ತಿಸುತ್ತವೆ? ನಮ್ಮ ಸುತ್ತಲಿನ ಮತ್ತು ನಮ್ಮೊಳಗೂ ಇರುವ ವೈರಸ್ಸುಗಳ ಕಥನ ಈ ಪುಸ್ತಕದಲ್ಲಿದೆ. ವೈರಸ್ಸುಗಳ ಹುಟ್ಟು, ಅವು ವಹಿಸುವ ಪಾತ್ರ, ವೈರಸ್ಸುಗಳ ಮಹತ್ವ ಈ ಪುಸ್ತಕದಲ್ಲಿದೆ. ಆಕರ್ಷಕ ಚಿತ್ರಗಳೂ, ವಿಸ್ತೃತ ಮಾಹಿತಿಯೂ ಓದುಗರ ಕಣ್ಮನ ಸೆಳೆಯುತ್ತದೆ.

ಮಾಹಿತಿ ಆಧಾರಿತ ಪುಸ್ತಕಗಳನ್ನು ಹುಡುಕುವವರಿಗೆ, ವಿಜ್ಞಾನ ಕಥನ ಕುತೂಹಲಿಗಳಿಗೆ ಈ ಪುಸ್ತಕ ರುಚಿಸುವುದಂತೂ ನಿಜ. ಪ್ರಣಯ್ ಲಾಲ್ ಅವರ ಈ ಪುಸ್ತಕ ಈಗಾಗಲೇ ಜಾಗತಿಕವಾಗಿ ಹೆಸರು ಪಡೆದಿದೆ. ಕನ್ನಡದಲ್ಲಿ, ಕನ್ನಡಿಗರ ಜಾಯಮಾನಕ್ಕೆ ಹೋಲುವಂತೆ ಅನುವಾದಿತ ಈ ಕೃತಿ ಸಂಗ್ರಹಯೋಗ್ಯವಾಗಿದೆ. ನಿಸರ್ಗದಲ್ಲಿ ಸಮತೋಲನ ಕಾಪಾಡುವಲ್ಲಿ ಸಹಾಯಕವಾಗಿರುವ ಹನ್ನೊಂದು ವೈವಿಧ್ಯಮಯ ವೈರಸ್ಸುಗಳ ವರ್ಣಮಯ ಕಥನ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಶಾಲಾ ಕಾಲೇಜು ಹಾಗೂ ಗ್ರಂಥಾಲಯಗಳಲ್ಲಿ ಇರಲೇಬೇಕಾದ ಮಾಹಿತಿಯುಕ್ತ ಮತ್ತು ಪೂರಕ ಓದಿಗೆ ಅನುಕೂಲವಾಗುವ ಪುಸ್ತಕ ಇದಾಗಿದೆ.

ಕಾಣದ ಲೋಕ; ವೈರಸ್ ವೃತ್ತಾಂತ

ಮೂಲ: ಪ್ರಣಯ್‌ಲಾಲ್

ಅನುವಾದ: ಕೊಳ್ಳೇಗಾಲ ಶರ್ಮ

ಪ್ರ: ಋತುಮಾನ

ಸಂ: 9480035877

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.