‘ಪಾಲಿಟಿಕ್ಸ್’ – ‘ಪೊಯಟಿಕ್ಸ್’ಗಳ ಅಪೂರ್ವ ಸಮತೋಲನ
ಜಿ.ರಾಜಶೇಖರ ಕನ್ನಡದ ಸಮಕಾಲೀನ ಚಿಂತಕರಲ್ಲೇ ತುಂಬ ಅನನ್ಯರೂ ವಿಶಿಷ್ಟರೂ ಆಗಿದ್ದಾರೆ. ಯಾವುದೇ ಭಾಷೆಯಲ್ಲಿ ಇಂಥ ಚಿಂತಕರು ತುಸು ವಿರಳ ಮತ್ತು ಅಪರೂಪ ಎಂದೇ ಹೇಳಬೇಕು. ಸಭ್ಯ ಗೃಹಸ್ಥ, ಜವಾಬ್ದಾರಿಯುತ ನಾಗರಿಕ, ಬದ್ಧತೆಯುಳ್ಳ ಸಾಮಾಜಿಕ / ರಾಜಕೀಯ ಕಾರ್ಯಕರ್ತ, ಸದಭಿರುಚಿಯ ಸಾಹಿತ್ಯಾಸಕ್ತ, ವಿನಯಶೀಲ ವಿಮರ್ಶಕ– ಇವರೆಲ್ಲರ ಗುಣಗಳನ್ನು ಒಂದು ಹದದಲ್ಲಿ ರೂಪಿಸಿಕೊಂಡ, ರೂಢಿಸಿಕೊಂಡ ವ್ಯಕ್ತಿತ್ವ ಇವರದು.Last Updated 8 ಫೆಬ್ರುವರಿ 2016, 5:35 IST