ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

MG Windsor EV: ಕಡಿಮೆ ಬೆಲೆಯಲ್ಲಿ ಐಷಾರಾಮಿ ಸೌಕರ್ಯದ ಕಾರು ಇದು!

ಅನಿಯಮಿತ ಅವಧಿಗೆ ಬ್ಯಾಟರಿ ಗ್ಯಾರಂಟಿ ಭರವಸೆ: ಶೇ 60ರ ಬೆಲೆಯಲ್ಲಿ ಮರಳಿ ಖರೀದಿಸುವ ಭರವಸೆ: ಬುಕ್ಕಿಂಗ್ ಆರಂಭ
Published : 11 ಸೆಪ್ಟೆಂಬರ್ 2024, 12:29 IST
Last Updated : 11 ಸೆಪ್ಟೆಂಬರ್ 2024, 12:29 IST
ಫಾಲೋ ಮಾಡಿ
Comments

ನವದೆಹಲಿ: ಮೋರಿಸ್ ಗ್ಯಾರೇಜಸ್‌ (ಎಂ.ಜಿ) ಹಾಗೂ ಜೆಎಸ್ಡಬ್ಲ್ಯೂ ಕಂಪನಿಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಬ್ಯಾಟರಿ ಚಾಲಿತ ವಿಂಡ್ಸರ್‌ ಎಂಬ ಕ್ರಾಸ್‌ಓವರ್ ಯುಟಿಲಿಟಿ ವೆಹಿಕಲ್ (ಸಿಯುವಿ) ಕಾರನ್ನು ಭಾರತದ ಮಾರುಕಟ್ಟೆಗೆ ಬುಧವಾರ ಬಿಡುಗಡೆಗೊಳಿಸಲಾಯಿತು.

ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನ ಐಷಾರಾಮಿ ಸೌಕರ್ಯವನ್ನು ನೀಡುವ ಭರವಸೆ ನೀಡಿರುವ ಕಂಪನಿಯು, ಅನಿಯಮಿತ ಬಳಕೆಯ ವಾರೆಂಟಿಯೊಂದಿಗೆ ಹಾಗೂ ಶೇ 60ರ ಬೆಲೆಯಲ್ಲಿ ಮರಳಿ ಖರೀದಿಸುವ ಭರವಸೆಯೊಂದಿಗೆ ಕಾರನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

38 ಕಿಲೋ ವ್ಯಾಟ್‌ನ ಬ್ಯಾಟರಿಯು ಒಮ್ಮೆ ಗರಿಷ್ಠ ಚಾರ್ಜ್‌ಗೆ 331 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. 136 ಅಶ್ವ ಶಕ್ತಿ ಹಾಗೂ 200 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಇದು ಉತ್ಪಾದಿಸಬಲ್ಲದು. 167.7 ಸೆಂ.ಮೀ. ಎತ್ತರ, 180 ಸೆಂ.ಮೀ. ಅಗಲ ಹಾಗೂ ವೀಲ್‌ ಬೇಸ್‌ 270 ಸೆಂ.ಮೀ. ಇದೆ. ಹಿಂಬದಿಯ ಆಸನ 135 ಡಿಗ್ರಿಯಷ್ಟು ಬಾಗುವ ಸೌಕರ್ಯವಿದ್ದು, ಸಹ ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕೆ ಒತ್ತು ನೀಡಲಾಗಿದೆ.

MG Windsor EV

MG Windsor EV

ಇನ್ಫಿನಿಟಿ ಕಂಪನಿಯ 9 ಸ್ಪೀಕರ್‌ ಹಾಗೂ 15.6 ಇಂಚುಗಳ ಬೃಹತ್ ಇನ್ಫೊಟೈನ್ಮೆಂಟ್‌ ಸಿಸ್ಟಂ ನೀಡಲಾಗಿದೆ. ಪ್ರಯಾಣಿಕರ ಅಪೇಕ್ಷೆಗೆ ತಕ್ಕಂತೆ ಒಳಾಂಗಣದ ದೀಪಗಳು 256 ಬಗೆಯ ಬಣ್ಣಗಳಲ್ಲಿ ಬದಲಿಸಲು ಅವಕಾಶವಿದೆ. ಬೃಹತ್ ಸನ್‌ರೂಫ್‌, 18 ಇಂಚಿನ ಟೈರ್‌ಗಳು ಇದರದ್ದು. ಸಾಮಾಜು ಸರಂಜಾಮು ಸಾಗಿಸಲು 604 ಲೀಟರ್‌ನಷ್ಟು ದೊಡ್ಡದಾದ ಬೂಟ್‌ ಸ್ಪೇಸ್‌ ಇದೆ.

ನೋಡಲು ಡಾಲ್ಫಿನ್ ರೂಪದಲ್ಲಿರುವ ಈ ಕಾರು 3 ಶ್ರೇಣಿಗಳಲ್ಲಿ ಹಾಗೂ 4 ಬಣ್ಣಗಳಲ್ಲಿ ಲಭ್ಯ. ಅತ್ಯಾಧುನಿಕ ಐಸ್ಮಾರ್ಟ್‌ ತಂತ್ರಜ್ಞಾನದ ಮೂಲಕ 100ಕ್ಕೂ ಹೆಚ್ಚು ಕೃತಕ ಬುದ್ಧಿಮತ್ತೆ ಆಧಾರಿತ ಧ್ವನಿ ಆಜ್ಞೆಗಳು ಇದರಲ್ಲಿವೆ.

ಬ್ಯಾಟರಿಯು ಅತಿಯಾದ ಬಿಸಿಲು ಹಾಗೂ ಅತಿಯಾದ ಚಳಿ ವಾತಾವರಣದಲ್ಲೂ ಒಂದೇ ರಿತಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ನೀರಿನಿಂದ ರಕ್ಷಿಸುವ ಇದರ ಗುಣಮಟ್ಟಕ್ಕೆ ಐಪಿ67 ಮಾನ್ಯತೆಯೂ ದೊರೆತಿದೆ.

ಆರಂಭಿಕ ಬೆಲೆಯಾಗಿ ₹9.9 ಲಕ್ಷ ಹಾಗೂ ಪ್ರತಿ ಕಿ.ಮೀ.ಗೆ ₹3.5ರಂತೆ ಬ್ಯಾಟರಿ ಬಾಡಿಗೆಯೊಂದಿಗೆ ಕಾರನ್ನು ಖರೀದಿಸಬಹುದು ಎಂದು ಎಂಜಿ ಮೋಟಾರ್ಸ್ ನ ಮುಖ್ಯ ವಾಣಿಜ್ಯ ಅಧಿಕಾರಿ ಸತೀಂದರ್ ಸಿಂಗ್ ಬಾಜ್ವಾ ತಿಳಿಸಿದರು.

‘ವಿಂಡ್ಸರ್ ಕ್ಯಾಸೆಲ್‌ ಎಂಬ ಅರಮನೆಯ ಕಲಾ ಶ್ರೀಮಂತಿಕೆಯಿಂದ ಪ್ರೇರಣೆಗೊಂಡು ಈ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಕಾರಿನಲ್ಲಿ ಚಾಲಕ ಹಾಗೂ ಪ್ರಯಾಣಿಕರ ಆರಾಮ ಮತ್ತು ಸುರಕ್ಷತೆಗೆ ಗರಿಷ್ಠ ಒತ್ತು ನೀಡಲಾಗಿದೆ. ಪ್ಯೂಯಲ್ ಎಂಜಿನ್‌ ನಿರ್ವಹಣೆಗಿಂತಲೂ ಕಡಿಮೆ ವೆಚ್ಚದಲ್ಲಿ ವಿಂಡ್ಸರ್‌ ಹೊಂದಬಹುದು. ಜತೆಗೆ ಮೂರು ವರ್ಷದ ವಾರಂಟಿ ನಂತರ ಮೂಲ ಬೆಲೆಯ ಶೇ 60ರ ದರದಲ್ಲಿ ಮರಳಿ ಖರೀದಿಸುವ ಅವಕಾಶವನ್ನು ಎಂಜಿ ಮೋಟಾರ್ಸ್ ನೀಡುತ್ತಿದೆ’ ಎಂದು ತಿಳಿಸಿದರು.

MG Windsor EV

MG Windsor EV

’ಎಂಜಿ ಮೋಟಾರ್ಸ್‌ ವಿಂಡ್ಸರ್ ಕಾರಿನಲ್ಲಿ ಸಂಪರ್ಕ ಹಾಗೂ ಮನರಂಜನೆಗಾಗಿ ಜಿಯೊದೊಂದಿಗೆ ಪಾಲುದಾರಿಕೆ ಹೊಂದಿದೆ. ಇವಿಹಬ್‌, ಇವಿಪಿಡಿಯಾದಂತ ಬಳಕೆದಾರ ಸ್ನೇಹಿ ಆ್ಯಪ್‌ಗಳನ್ನು ಎಂಜಿ ಅಭಿವೃದ್ಧಿಪಡಿಸಿದೆ’ ಎಂದು ತಿಳಿಸಿದರು.

ಎಂಜಿ ವಿಂಡ್ಸರ್‌ ಇವಿ ಕಾರಿನ ಮುಂಗಡ ಬುಕ್ಕಿಂಗ್ ಬಿಡುಗಡೆ ಸಮಯ (ಸೆ. 11)ದಿಂದಲೇ ಆರಂಭವಾಗಿದೆ. ಟೆಸ್ಟ್‌ಡ್ರೈವ್‌ ಸೆ. 25ರಿಂದ ದೇಶದ ಎಲ್ಲಾ ಎಂಜಿ ಮಾರಾಟ ಮಳಿಗೆಗಳಲ್ಲಿ ಲಭ್ಯ. ಟೆಸ್ಟ್‌ ಡ್ರೈವ್‌ ನಂತರದ ಕಾರುಗಳ ಬುಕ್ಕಿಂಗ್‌ ಅಕ್ಟೋಬರ್‌ 3ರ ನಂತರ ಹಾಗೂ ಕಾರುಗಳ ಮಾರಾಟ ಅ. 12ರಿಂದ ಲಭ್ಯ ಎಂದು ತಿಳಿಸಿದ್ದಾರೆ.

ವಿಂಡ್ಸರ್ ಕಾರು ಬಿಡುಗಡೆ ಸಂದರ್ಭದಲ್ಲಿ ಎಂಜಿ ಮೋಟಾರ್ಸ್ ಇಂಡಿಯಾದ ಸಿಇಒ ರಾಜೀವ್ ಛಾಬಾ ಮಾತನಾಡಿದರು. ಜೆ ಎಸ್ ಡಬ್ಲ್ಯೂ ಎಂಜಿ ಮೋಟಾರ್ಸ್ ನ ನಿರ್ದೇಶಕ ಪಾರ್ಥ ಜಿಂದಾಲ್, ಗೌರವ್ ಗುಪ್ತಾ, ಬಿಜು ಬಾಲೇಂದ್ರನ್ ಇದ್ದರು.

ಬುಧವಾರ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹೊಸ MG Windsor EV ಬಿಡುಗಡೆ ಮಾಡಲಾಯಿತು. ಎಂಜಿ ಮೋಟಾರ್ಸ್ ಇಂಡಿಯಾದ ಸಿಇಒ ರಾಜೀವ್ ಛಾಬಾ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ.

ಬುಧವಾರ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹೊಸ MG Windsor EV ಬಿಡುಗಡೆ ಮಾಡಲಾಯಿತು. ಎಂಜಿ ಮೋಟಾರ್ಸ್ ಇಂಡಿಯಾದ ಸಿಇಒ ರಾಜೀವ್ ಛಾಬಾ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ.

MG Windsor EV

MG Windsor EV

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT