ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಫ್‌ಐಎಚ್ ಪ್ರಶಸ್ತಿ ರೇಸ್‌ನಲ್ಲಿ ಹರ್ಮನ್‌ಪ್ರೀತ್‌, ಶ್ರೀಜೇಶ್‌

Published : 17 ಸೆಪ್ಟೆಂಬರ್ 2024, 14:51 IST
Last Updated : 17 ಸೆಪ್ಟೆಂಬರ್ 2024, 14:51 IST
ಫಾಲೋ ಮಾಡಿ
Comments

ಲುಸಾನ್‌, ಸ್ವಿಟ್ಜರ್ಲೆಂಡ್: ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಎಫ್‌ಐಎಚ್ ‘ವರ್ಷದ ಆಟಗಾರ’ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅಂತರರಾಷ್ಟ್ರೀಯ ಹಾಕಿಗೆ ಈಚೆಗೆ ನಿವೃತ್ತಿ ಘೋಷಿಸಿರುವ ಪಿ.ಆರ್. ಶ್ರೀಜೇಶ್ ಅವರು ‘ವರ್ಷದ ಗೋಲ್‌ಕೀಪರ್’ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.

ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಅಭ್ಯರ್ಥಿಗಳ ಹೆಸರನ್ನು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಮಂಗಳವಾರ ಪ್ರಕಟಿಸಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಕಂಚಿನ ಪದಕ ಜಯಿಸುವಲ್ಲಿ ಹರ್ಮನ್‌ಪ್ರೀತ್ ಮತ್ತು ಶ್ರೀಜೇಶ್ ಪ್ರಮುಖ ಪಾತ್ರ ವಹಿಸಿದ್ದರು.

ಒಲಿಂಪಿಕ್ಸ್‌ನ ಟೂರ್ನಿಯಲ್ಲಿಯೇ ಅತ್ಯಧಿಕ ಗೋಲನ್ನು (10) ಹರ್ಮನ್‌ ಗಳಿಸಿದ್ದರು. ನೆದರ್ಲೆಂಡ್ಸ್‌ನ ಥಿಯೆರಿ ಬ್ರಿಂಕ್‌ಮನ್, ಜೋಪ್ ಡಿ ಮೋಲ್, ಜರ್ಮನಿಯ ಹ್ಯಾನ್ಸ್ ಮುಲ್ಲರ್, ಇಂಗ್ಲೆಂಡ್‌ನ ಝಾಕ್ ವ್ಯಾಲೇಸ್ ‘ವರ್ಷದ ಆಟಗಾರ’ ಪ್ರಶಸ್ತಿಯ ರೇಸ್‌ನಲ್ಲಿ ಇತರ ಆಟಗಾರರಾಗಿದ್ದಾರೆ.

ತಮ್ಮ ಕೊನೆಯ ಒಲಿಂಪಿಕ್ಸ್‌ನಲ್ಲಿ ಶ್ರೀಜೇಶ್‌ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ವಿಶೇಷವಾಗಿ ಇಂಗ್ಲೆಂಡ್‌ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಕೇವಲ 10 ಸದಸ್ಯರು ಇದ್ದಾಗಲೂ ಭಾರತ ಗೆಲುವು ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಶ್ರೀಜೇಶ್‌ ಅವರೊಂದಿಗೆ ನೆದರ್ಲೆಂಡ್ಸ್‌ನ ಪಿರ್ಮಿನ್ ಬ್ಲ್ಯಾಕ್, ಸ್ಪೇನ್‌ನ ಲೂಯಿಸ್ ಕ್ಯಾಲ್ಜಾಡೊ, ಜರ್ಮನಿಯ ಜೀನ್ ಪಾಲ್ ಡ್ಯಾನೆಬರ್ಗ್, ಅರ್ಜೇಟೀನಾದ ಥಾಮಸ್ ಸ್ಯಾಂಟಿಯಾಗೊ ಅವರು ‘ವರ್ಷದ ಗೋಲ್‌ಕೀಪರ್’ ಗೌರವದ ಸ್ಪರ್ಧೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT