ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಮೂಲಕ ಜನವರಿಯಲ್ಲಿ ₹1.96 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ದೇಶೀಯ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಗಳು ಸದೃಢಗೊಂಡಿದೆ. ಇದರಿಂದ ವರಮಾನ ಸಂಗ್ರಹದಲ್ಲಿ ಶೇ 12.3ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
ADVERTISEMENT
ADVERTISEMENT
ದೇಶೀಯ ವಹಿವಾಟು ಮೇಲಿನ ಜಿಎಸ್‌ಟಿ ಸಂಗ್ರಹದಲ್ಲಿ ಶೇ 10.4ರಷ್ಟು ಏರಿಕೆಯಾಗಿದ್ದು, ಒಟ್ಟು ₹1.47 ಲಕ್ಷ ಕೋಟಿ ಸಂಗ್ರಹವಾಗಿದೆ. ಆಮದು ಸರಕುಗಳ ಮೇಲಿನ ಸಂಗ್ರಹದಲ್ಲಿ ಶೇ 19.8ರಷ್ಟು ಏರಿಕೆಯಾಗಿದ್ದು, ₹48,382 ಕೋಟಿ ಸಂಗ್ರಹವಾಗಿದೆ.
ಜನವರಿಯಲ್ಲಿ ಒಟ್ಟು ₹23,853 ಕೋಟಿ ಮರುಪಾವತಿ ಮಾಡಲಾಗಿದೆ. ಮರುಪಾವತಿ ಬಳಿಕ ಒಟ್ಟು ವರಮಾನ ಸಂಗ್ರಹ ₹1.72 ಲಕ್ಷ ಕೋಟಿ ಆಗಿದೆ.