ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯಪ್ರಾಚ್ಯ ಸಂಘರ್ಷ: ಶೇ 2ಕ್ಕಿಂತಲೂ ಹೆಚ್ಚು ಕುಸಿದ ಸೆನ್ಸೆಕ್ಸ್, ನಿಫ್ಟಿ

Published : 3 ಅಕ್ಟೋಬರ್ 2024, 11:28 IST
Last Updated : 3 ಅಕ್ಟೋಬರ್ 2024, 11:28 IST
ಫಾಲೋ ಮಾಡಿ
Comments

ಮುಂಬೈ: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಗುರುವಾರ ಷೇರುಪೇಟೆಯ ಈಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಶೇ 2ಕ್ಕಿಂತಲೂ ಅಧಿಕ ಕುಸಿತ ಕಂಡುಬಂದಿದೆ.

ಬೃಹತ್ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳಲ್ಲಿ ಕುಸಿತ ಕಂಡುಬಂದಿದೆ.

ಸತತ 4ನೇ ದಿನವೂ ಕುಸಿತ ಕಂಡ ಬಿಎಸ್‌ಇ ಸೆನ್ಸೆಕ್ಸ್ ಗುರುವಾರದ ಷೇರು ವಹಿವಾಟಿನ ಅಂತ್ಯಕ್ಕೆ 1,769.19 ಅಂಶಗಳಷ್ಟು ಅಥವಾ ಶೇ 2.10ರಷ್ಟು ಕುಸಿದು 82,497.10ರಲ್ಲಿ ವಹಿವಾಟು ಅಂತ್ಯಗೊಳಿಸಿತು. ದಿನದಲ್ಲಿ 1,832.27 ರಷ್ಟು ಕುಸಿದು, 82,434.02 ರಲ್ಲಿ ವಹಿವಾಟು ನಡೆಸಿತ್ತು.

ಎನ್‌ಎಸ್‌ಇ ನಿಫ್ಟಿ 546.80 ಅಂಶಗಳಷ್ಟು ಕುಸಿದು, 25,250.10ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ವಿದೇಶಿ ಬಂಡವಾಳ ಹಿಂತೆಗೆತ ಮತ್ತು ಕಚ್ಚಾ ತೈಲ ದರ ಏರಿಕೆ ಷೇರುಪೇಟೆ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ವಿಶ್ಲೇಷಕರು.

ಸೆನ್ಸೆಕ್ಸ್ ಪೈಕಿ ಲಾರ್ಸೆನ್ ಅಂಡ್ ಟರ್ಬೊ, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್, ಏಷಿಯನ್ ಪೇಂಟ್ಸ್, ಟಾಟಾ ಮೋಟಾರ್ಸ್, ಬಜಾಜ್ ಫೈನಾನ್ಸ್, ಮಾರುತಿ, ಬಜಾಜ್ ಫಿನ್ಸರ್ವ್, ಕೋಟಕ್ ಮಹೀಂದ್ರ ಬ್ಯಾಂಕ್, ಟೈಟನ್, ಅದಾನಿ ಪೋರ್ಟ್ಸ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ನಷ್ಟ ಅನುಭವಿಸಿವೆ.

ಬೃಹತ್ ಕಂಪನಿಗಳ ಪೈಕಿ ಜೆಎಸ್‌ಡಬ್ಲ್ಯು ಸ್ಟೀಲ್ಸ್ ಮಾತ್ರ ಲಾಭ ಗಳಿಸಿದೆ.

‘ಇಸ್ರೇಲ್‌ನತ್ತ ಇರಾನ್ ಖಂಡಾಂತರ ಕ್ಷಿಪಣಿ ಉಡಾಯಿಸುತ್ತಿದ್ದಂತೆ ಅದಕ್ಕೆ ಪ್ರತಿಯೆಯಾಗಿ ಇಸ್ರೇಲ್ ನಡೆಸುವ ಆಕ್ರಮಣವು ದೊಡ್ಡ ಯುದ್ಧಕ್ಕೆ ನಾಂದಿ ಆಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ದೇಶೀಯ ಷೇರುಪೇಟೆ ಕುಸಿದಿದೆ’ಎಂದು ಜಿಯೋಜಿತ್ ಫೈನಾನ್ಸ್ ಸರ್ವಿಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಏಷ್ಯಾ ಷೇರುಪೇಟೆಗಳ ಪೈಕಿ ಹಾಂಗ್‌ಕಾಂಗ್ ಪೇಟೆ ಕುಸಿತ ಕಂಡಿದೆ. ನಿಕ್ಕಿ ಚೇತರಿಕೆ ದಾಖಲಿಸಿದೆ. ಯೂರೋಪ್ ಷೇರುಪೇಟೆಗಳು ಕುಸಿತ ಕಂಡರೆ, ಅಮೆರಿಕ ಷೇರುಪೇಟೆಯಲ್ಲಿ ಏರಿಕೆ ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT