ಸರಸ್ವತಿ ನಮಸ್ತುಭ್ಯಂ

ವರದೇ ಕಾಮರೂಪಿಣಿ ।

ವಿದ್ಯಾರಂಭಂ ಕರಿಷ್ಯಾಮಿ

ಸಿದ್ಧಿರ್ಭವತು ಮೇ ಸದಾ ।।

ಇದರ ತಾತ್ಪರ್ಯ ಹೀಗೆ:

‘ವರಗಳನ್ನು ಕೊಡುವವಳೂ ಇಷ್ಟಬಂದ ರೂಪಗಳನ್ನು ತಾಳುವವಳೂ ಆದ ಸರಸ್ವತಿಯೆ, ನಾನು ವಿದ್ಯೆಯನ್ನು ಕಲಿಯಲು ಆರಂಭ ಮಾಡುತ್ತೇನೆ; ನನಗೆ ಎಂದೆಂದಿಗೂ ಸಿದ್ಧಿ ಉಂಟಾಗಲಿ.’

ಇಂದು ಸರಸ್ವತಿಯ ಆರಾಧನೆಗೆ ಮೀಸಲಾದ ದಿನ. ಸರಸ್ವತಿ ಎಂದರೆ ವಿದ್ಯಾದೇವತೆ.

ವಿದ್ಯೆ ಯಾರಿಗೆ ತಾನೆ ಬೇಡ? ಇಂದಿನ ಸಂದರ್ಭದಲ್ಲಂತೂ ವಿದ್ಯೆಯ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳಲ್ಲಿ ಆತಂಕದ ಛಾಯೆ ಇರುವುದೂ ಸುಳ್ಳಲ್ಲ. ನಮ್ಮ ಮಕ್ಕಳಿಗೆ ವಿದ್ಯಾಕೇಂದ್ರಗಳಾಗಿದ್ದ ಶಾಲಾಕಾಲೇಜುಗಳು ಇನ್ನೂ ತೆರೆದಿಲ್ಲ. ಇದರಿಂದ ಪೋಷಕರಿಗೆ ಒಂದು ವಿಧದ ಆತಂಕ; ಮಕ್ಕಳಿಗೆ ಇನ್ನೊಂದು ರೀತಿಯ ಆತಂಕ; ರಾಜಕಾರಣಿಗಳಿಗೆ ಇನ್ನು ಏನೇನೋ ಆತಂಕಗಳು!

ವಿದ್ಯೆ ಏಕಾದರೂ ಬೇಕು? ಅದು ನಮ್ಮ ಜೀವನವನ್ನು ಉದ್ಧಾರಮಾಡುತ್ತದೆ ಎಂಬ ಕಾರಣದಿಂದ.

ಇಲ್ಲಿ ಸರಸ್ವತಿಯನ್ನು ಪ್ರಾರ್ಥನೆ ಮಾಡಿರುವುದು ಕೂಡ ವಿದ್ಯೆಯನ್ನು ಸಂಪಾದಿಸುವುದರಲ್ಲಿ ಸಿದ್ಧಿ ಒದಗಬೇಕಿದೆ; ಆ ಸಿದ್ಧಿ ಒದಗಲು ಅವಳ ಅನುಗ್ರಹ ಬೇಕು ಎಂಬ ಕಾರಣದಿಂದ.

ಸರಸ್ವತಿಯು ವರಗಳನ್ನು ಕೊಡುವವಳು ಮತ್ತು ಬೇಕಾದ ರೂಪಗಳನ್ನು ಧರಿಸಬಲ್ಲವಳು – ಎಂದಿದೆ ಶ್ಲೋಕ.

ವರಗಳು ನಮ್ಮ ಇಷ್ಟಾರ್ಥವನ್ನು ಪೂರೈಸಿಕೊಳ್ಳಲು ಒದಗುವ ಸಾಧನಗಳು; ಅದೂ ದೈವಿಕವಾಗಿ ಒದಗಿದ ಸಾಧನಗಳು. ಎಂದರೆ ಸರಸ್ವತಿಯ ಅನುಗ್ರಹದಿಂದ ಸಿದ್ಧಿಸಿದ ವಿದ್ಯೆಯಿಂದ ನಾವು ನಮ್ಮ ಜೀವನಕ್ಕೇ ಬೇಕಾದ ಎಲ್ಲ ವರಗಳನ್ನೂ ದಕ್ಕಿಸಿಕೊಳ್ಳಬಹುದು.

ಸರಸ್ವತಿಯ ರೂಪವನ್ನು ಕುರಿತೂ ಈ ಶ್ಲೋಕ ಹೇಳುತ್ತಿದೆ: ಅವಳು ಬೇಕಾದ ರೂಪವನ್ನು ಧರಿಸಬಲ್ಲಳು – ಎಂದು. ವಿದ್ಯೆ ನಮಗೆ ಎಷ್ಟೆಲ್ಲ ರೂಪಗಳಲ್ಲಿ ಒದಗುತ್ತದೆ, ನಮ್ಮನ್ನು ಉದ್ಧರಿಸುತ್ತದೆ ಎಂದು ನಾವು ಊಹಿಸಲೂ ಸಾಧ್ಯವಿಲ್ಲ. ಹೀಗಾಗಿಯೇ ನಮಗೆ ವಿದ್ಯೆ ಜೀವನದ ಎಲ್ಲ ವಿವರಗಳಲ್ಲೂ ಬೇಕಾಗಿದೆ; ಅದನ್ನು ದೇವಿ ಶಾರದೆ ನಮಗೆ ಅನುಗ್ರಹಿಸಬೇಕಾಗಿದೆ.

ವಿದ್ಯೆ ಎಂದರೆ ಕೇವಲ ಅಕ್ಷರಜ್ಞಾನ ಎಂಬಂಥ ಸಮೀಕರಣ ನಮ್ಮ ಆಧುನಿಕ ಕಾಲದ ಮನೋಧರ್ಮ. ಆದರೆ ಇಂಥ ನಿಲುವು ಪ್ರಾಚೀನ ಕಾಲದಲ್ಲಿ ಇರಲಿಲ್ಲ. ನಮ್ಮ ಜೀವನದ ಏಳಿಗೆಗೆ ನೆರವಾಗುವ ಎಲ್ಲ ಬಗೆಯ ತಿಳಿವಳಿಕೆಯನ್ನೂ ವಿದ್ಯೆ ಎಂಬುದಾಗಿಯೇ ಪರಿಗಣಿಸಲಾಗುತ್ತಿತ್ತು. ಪಾಕಶಾಸ್ತ್ರದಿಂದ ಮೊದಲುಗೊಂಡು ತತ್ತ್ವಶಾಸ್ತ್ರದ ವರೆಗೆ, ಸಂಗೀತದಿಂದ ಆರಂಭಿಸಿ ಕೃಷಿಯ ತನಕ – ಎಲ್ಲವೂ ವಿದ್ಯೆಗಳೇ. ವಿದ್ಯೆ ಎಂಬುದು ನಮ್ಮ ಜೀವನಕ್ಕೆ ಒದಗುವ ಎಲ್ಲ ವಿಧದ ಶಕ್ತಿಯೇ ಹೌದು.

ಹೀಗಾಗಿ ವಿದ್ಯೆಯ ದಿಟವಾದ ಅರ್ಥವನ್ನು ಕಂಡುಕೊಂಡು, ಅದನ್ನು ಪಡೆದುಕೊಂಡು, ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳೋಣ. ಕೇವಲ ಅಕ್ಷರಜ್ಞಾನವೇ ವಿದ್ಯೆ–ಶಿಕ್ಷಣ ಎಂಬ ಸಂಕುಚಿತ ಮನೋಧರ್ಮದಿಂದ ಬಿಡುಗಡೆಯನ್ನು ಪಡೆಯೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.