ಜಮಖಂಡಿ: ತಾಲ್ಲೂಕಿನ ತುಬಚಿ ಗ್ರಾಮದಲ್ಲಿ ಸಿಡಿಲು ಬಡೆದು ಶುಕ್ರವಾರ ಸಂಜೆ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ. ಇಬ್ಬರಿಗೆ ಸುಟ್ಟ ಗಾಯಗಳಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತುಬಚಿ ಗ್ರಾಮದ ಪ್ರಥಮೇಶ ಪಾಟೀಲ(19) ಮೃತರು. ಗಾಯಗೊಂಡ ಈರಣ್ಣ ನಾವಿ (19) ಹಾಗೂ ಶ್ರೀಶೈಲ ಕುಂಬಾರ(19) ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂವರು ಯುವಕರು ಹೊಲದಲ್ಲಿ ಕಬ್ಬು ನಾಟಿ ಮಾಡಲು ತೆರಳಿದ್ದರು. ಸಂಜೆ ಜಿಟಿಜಿಟಿ ಮಳೆ ಆಗುವ ವೇಳೆ ಸಿಡಿಲು ಮಿಂಚಿನ ಅಬ್ಬರಿಸುತ್ತಿದ್ದರು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಈ ಘಟನೆ ನಡೆದಿದೆ.

ಮೃತ ಯುವಕನಿಗೆ ತಂದೆ, ತಾಯಿ, ಸಹೋದರ ಇದ್ದಾರೆ. ಮೃತ ಪ್ರಥಮೇಶ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ತಹಶೀಲ್ದಾರ್ ಸದಾಶಿವ ಮಕ್ಕೋಜಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.