ಕನಕಪುರ: ಕಾಡಾನೆ ದಾಳಿಯಿಂದ ಮೃತಪಟ್ಟ ರೈತ ಶಿವರುದ್ರ ಅವರ ಮನೆಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಸೋಮವಾರ ಭೇಟಿ ನೀಡಿ ಸಾಂತ್ವನ ಹೇಳಿ, ವೈಯಕ್ತಿಕ ಧನ ಸಹಾಯ ಮಾಡಿದರು.

ಈ ವೇಳೆ ಅರಣ್ಯ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಕಾಡಾನೆ ದಾಳಿಗೆ ಕೊಡುವ ₹15 ಲಕ್ಷ ಪರಿಹಾರವನ್ನು ನೇರವಾಗಿ ಮೃತರ ವಾರಸುದಾರರ ಖಾತೆಗೆ ವರ್ಗಾವಣೆ ಮಾಡುವಂತೆ ಮನವಿ ಮಾಡಿದರು.

ಕಾಡಾನೆ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಬಹುತೇಕ ಕಡೆ ರೈಲ್ವೇ ಕಂಬಿ ಅಳವಡಿಸಲಾಗಿದೆ. ಅಳವಡಿಸದ ಪ್ರದೇಶದಲ್ಲಿ ಹ್ಯಾಂಗಿಂಗ್ ಸೋಲಾರ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಅದು ಪೂರ್ಣಗೊಂಡರೆ ಕಾಡಾನೆ ಹಾವಳಿ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣ ಆಗಲಿವೆ ಎಂದು ತಿಳಿಸಿದರು.

ಸಿಎಫ್ ಎಸ್. ಸಿವಶಂಕರ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಡಿಸಿಎಫ್ ಪ್ರಭಾಕರ್ ಪ್ರಿಯದರ್ಶಿ, ಎಸಿಎಫ್ ವಿಶಾಲ್ ಪಾಟೀಲ್, ರಾಮನಗರ ಪ್ರಾದೇಶಿಕ ಅರಣ್ಯದ ಡಿಸಿಎಫ್ ರಾಮಕೃಷ್ಣ, ಎಸಿಎಫ್ ಗಣೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.