ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವಿನಲ್ಲೂ ಸಾರ್ಥಕತೆ | ಅಪಘಾತದಲ್ಲಿ ಯುವಕರ ಸಾವು: ನಾಲ್ವರು ಅಂಧರಿಗೆ ನೇತ್ರದಾನ

Published : 7 ಸೆಪ್ಟೆಂಬರ್ 2024, 10:20 IST
Last Updated : 7 ಸೆಪ್ಟೆಂಬರ್ 2024, 10:20 IST
ಫಾಲೋ ಮಾಡಿ
Comments

ತರೀಕೆರೆ(ಚಿಕ್ಕಮಗಳೂರು): ಗಣಪತಿ ಮೂರ್ತಿ ತರಲು ಯುವಕರು ಹೋಗುತ್ತಿದ್ದ ಮಿನಿ ಗೂಡ್ಸ್ ವಾಹನ ಪಲ್ಟಿಯಾಗಿ ಇಬ್ಬರು ಯುವಕರು ಮೃತಪಟ್ಟಿದ್ದು, ಅವರ ನೇತ್ರದಾನಕ್ಕೆ ಇಬ್ಬರ ಪೋಷಕರು ನಿರ್ಧರಿಸಿದ್ದಾರೆ. ಇದರಿಂದ ನಾಲ್ವರು ಅಂಧರ ಬಾಳಿಗೆ ಬೆಳಕು ದೊರೆತಂತಾಗಿದೆ.

ಲಿಂಗದಹಳ್ಳಿ ಗ್ರಾಮದ ಸಹ್ಯಾದ್ರಿಪುರ ನಿವಾಸಿಗಳಾದ ಶ್ರೀಧರ(20) ಮತ್ತು ಧನುಷ್(17) ಮೃತಪಟ್ಟವರು.‌

ಗಣಪತಿ ಮೂರ್ತಿ ತರಲು ಗ್ರಾಮದ ಯುವಕರು ಟಾಟಾ ಏಸ್ ವಾಹನದಲ್ಲಿ ಏಳು ಯುವಕರು ತರೀಕೆರೆಗೆ ಹೊರಟಿದ್ದರು. ಭೈರಾಪುರ ಬಳಿ ತಿರುವಿನಲ್ಲಿ ವಾಹನ ಪಲ್ಟಿಯಾಗಿ ಎಲ್ಲರೂ ಗಾಯಗೊಂಡಿದ್ದರು. ಶ್ರೀಧರ್ ಮತ್ತು ಧನುಷ್ ಸ್ಥಳದಲ್ಲೇ ಮೃತಪಟ್ಟಿದ್ದರು.

ಇದೇ ಗ್ರಾಮದ ಮಂಜು , ವರುಣ, ಗುರುಮೂರ್ತಿ, ಚಂದ್ರಶೇಖರ ಮತ್ತು ಸಂದೀಪ ಎಂಬುವರು ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯರ ಸಲಹೆ ಮೇರೆಗೆ ಶ್ರೀಧರ್ ಪೋಷಕರಾದ ಕುಬೇಂದ್ರ- ಪದ್ಮಾ ಮತ್ತು ಧನುಷ್ ಅವರ ಪೋಷಕರಾದ ರಮೇಶ್- ಶೋಭಾ ಅವರು‌‌ ಮಕ್ಕಳ ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿದರು.

ಶಸ್ತ್ರಚಿಕಿತ್ಸೆ ನಡೆಸಿ ಅವರ ನಾಲ್ಕು ಕಣ್ಣುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದ್ದು, ನಾಲ್ವರು ಅಂಧರಿಗೆ ದೃಷ್ಟಿ ದೊರಕಲಿದೆ ಎಂದು ತರೀಕೆರೆ ತಾಲ್ಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ದೇವರಾಜ್ ‌'ಪ್ರಜಾವಾಣಿ'ಗೆ ತಿಳಿಸಿದರು.

ತರೀಕೆರೆ ತಾಲ್ಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ದೇವರಾಜ್(ಎಡದಿಂದ ಎರಡನಯವರು) ಜೊತೆ ಮೃತರ ಪೋಷಕರು ಮತ್ತು ಸಂಬಂಧಿಕರು

ತರೀಕೆರೆ ತಾಲ್ಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ದೇವರಾಜ್(ಎಡದಿಂದ ಎರಡನಯವರು) ಜೊತೆ ಮೃತರ ಪೋಷಕರು ಮತ್ತು ಸಂಬಂಧಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT