ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಕೋಟೆ: ಜನಮನ ಸೆಳೆದ ‘ಮುದುಕನ ಮದುವೆ‘

Published 14 ಜೂನ್ 2024, 13:42 IST
Last Updated 14 ಜೂನ್ 2024, 13:42 IST
ಅಕ್ಷರ ಗಾತ್ರ

ಹೊಸಕೋಟೆ: ತಾಲ್ಲೂಕಿನ ನಿಂಬೇಕಾಯಿಪುರದ ಬಳಿ ಇರುವ ಜನಪದರು ರಂಗವೇದಿಕೆಯಲ್ಲಿ ರಂಗಮಾಲೆ 83ರ ಅಂಗವಾಗಿ ಈಚೆಗೆ ಪ್ರದರ್ಶನಗೊಂಡ ‘ಮುದುಕನ ಮದುವೆ’ ನಾಟಕ ಜನರ ಮನ ಗೆದ್ದಿತು.

ನಾಟಕ ರಚನಕಾರ ಬಿ.ಬಿ.ದತ್ತರಗಿ ರಚನ ಈ ನಾಟಕವನ್ನು ಬೆಂಗಳೂರಿನ ಸಾಫಲ್ಯ ರಂಗತಂಡ ಮಲ್ಲಿಕಾರ್ಜುನ ನಿರ್ದೇಶನದಲ್ಲಿ ಅಭಿನಯಿಸಿತು.

ಕಂಪನಿ ಶೈಲಿಯ ಸಾಮಾಜಿಕ ಹಾಸ್ಯ ಪ್ರಧಾನ್ಯವಾಗಿದ್ದು ನಾಟಕ, ಕಚಗುಳಿಯಿಡುವ ಸಂಭಾಷಣೆಯಿಂದ ನೆರೆದಿದ್ದ ಜನರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿ, ರಂಜಿಸಿತು. ಪ್ರೇಕ್ಷರು ಚಪ್ಪಾಳೆ ತಟ್ಟಿ ಸಿಳ್ಳೆ ಹಾಕಿ ನಟರನ್ನು ಪ್ರೋತ್ತಾಹಿಸಿದರು.

ನಾಟಕದಲ್ಲಿ ಚಲನಚಿತ್ರ, ಕಿರುತೆರೆಯ ನಟ ಎಂ.ಎನ್.ಸುರೇಶ್, ಜ್ಯೂನಿಯರ್ ವಿಷ್ಣುವರ್ಧನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರು. 

ಜನಪದರು ವೇದಿಕೆಯ ಅಧ್ಯಕ್ಷ ಪಾಪಣ್ಣ ಮಾತನಾಡಿ, ಜೀವನದ ಜಂಟಾಜದಲ್ಲಿ ಎಲ್ಲವನ್ನೂ ಮರೆತು ಕೆಲಕಾಲ ಆನಂದ ಪಡೆಯಲು ರಂಗಭೂಮಿ ಉತ್ತಮ ವೇದಿಕೆಯಾಗಿದೆ. ಇಂದು ಪ್ರದರ್ಶನಗೊಂಡ ಮುದುಕನ ಮದುವೆ ಹಾಸ್ಯಪ್ರಧಾನ ನಾಟಕವಾಗಿದ್ದು, ಜನರ ಚಿತ್ರವನ್ನು ಕೆಲಕಾಲ ತನ್ನತ್ತ ಸೆಳೆದಿದ್ದು ದಿಟ ಎಂದರು.

ನಾಟಕದಲ್ಲಿ ಎಂ.ಎನ್.ಸುರೇಶ, ಶ್ರೀಧರ್ ತುರವೇಕೆರೆ, ಲಕ್ಷ್ಮಿ ಶ್ರೀಧರ್, ಜೂ. ವಿಷ್ಣು ರಾಜು, ಮಂಡ್ಯ ಜಯರಾಮ್, ಶ್ರೀದೇವಿ, ವಿವೇಕ, ಜಯಶ್ರೀ ರಾಜು ಅಭಿನಯಿಸಿದರು. ತಾಂತ್ರಿಕ ವರ್ಗದಲ್ಲಿ ಕೀಬೋರ್ಡ್ ವಾದಕರಾಗಿ ಮಧು, ಪ್ಯಾಡ್ ವಾದಕ ಪುನೀತ್ ಇದ್ದರು.

ಈ ಸಂದರ್ಭದಲ್ಲಿ ನಾಟಕದ ಪ್ರಾಯೋಜಕರಾದ ಜ್ಯೋತಿಪುರ ಶ್ರೀವೇಣು, ದೊಡ್ಟಬನಹಳ್ಳಿ ಸಿದ್ಧೇಶ್ವರ ನನಸುಮನೆ, ಎಂ ಸುರೇಶ್, ಶಿವಕುಮಾರ್, ಮುನಿರಾಜಪ್ಪ ಮುಂತಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT