ವಿಜಯಪುರ (ದೇವನಹಳ್ಳಿ): ಕಳೆದ ಎರಡು ತಿಂಗಳ ಹಿಂದೆ ರೈತರ ತೋಟದಲ್ಲೇ ಕೆ.ಜಿಗೆ ₹150ರಿಂದ ₹220ಕ್ಕೆ ಖರೀದಿಯಾಗುತ್ತಿದ್ದ ದಾಳಿಂಬೆ ಬೆಲೆಯು ಏಕಾಏಕಿ ₹50ಕ್ಕೆ ಕುಸಿದಿದೆ. ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ನಾಲ್ಕು ತಿಂಗಳ ಹಿಂದೆ ದಾಳಿಂಬೆಗೆ ಬಂಪರ್ ಬೆಲೆ ಸಿಕ್ಕಿತ್ತು. ತೋಟದಲ್ಲೇ ಕೆ.ಜಿಗೆ ₹250ಕ್ಕೆ ಮಾರಾಟ ಆಗುತ್ತಿತ್ತು. ಎರಡು ತಿಂಗಳಿಂದ ಇಳಿಕೆಯ ಹಾದಿ ಹಿಡಿದಿದ್ದ ಬೆಲೆ ಮತ್ತೆ ಚೇತರಿಸಿಕೊಳ್ಳುತ್ತಿಲ್ಲ. ಈಗ ಕನಿಷ್ಠ ಬೆಲೆಗೆ ಬಂದು ನಿಂತಿದೆ ಎನ್ನುತ್ತಾರೆ ಬೆಳೆಗಾರರು.

‘ತರಕಾರಿ, ದ್ರಾಕ್ಷಿ ಮತ್ತು ಇತರೆ ಹಣ್ಣುಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲ. ಬೇಗ ಹಾಳಾಗುವ ಕಾರಣ ದಾಳಿಂಬೆ ಬೆಳೆಯಲು ಆರಂಭಿಸಿದೆವು. ಈಗ ನೋಡಿದರೆ ದಾಳಿಂಬೆ ಖರೀದಿಗೆ ತೋಟಕ್ಕೆ ಬರುವ ವರ್ತಕರು ಕೆ.ಜಿಗೆ ₹50 ಕೇಳುತ್ತಿದ್ದಾರೆ. ಈ ಬೆಲೆಗೆ ನೀಡಿದರೆ ಹಾಕಿದ ಬಂಡವಾಳದಲ್ಲಿ ಶೇ 50ರಷ್ಟು ನಮ್ಮ ಕೈ ಸೇರುವುದಿಲ್ಲ. ಬೆಲೆ ಸಿಗುತ್ತಿಲ್ಲ ಎಂದು ಹಾಗೇ ಬಿಟ್ಟರೆ ತೋಟದಲ್ಲೇ ಹಣ್ಣು ಕೊಳೆಯುತ್ತದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ.

ವ್ಯಾಪಾರಿಗಳು ತೋಟಗಳಿಗೆ ಬಂದು ರೈತರನ್ನು ಕಾಡಿಬೇಡಿ ಕೇಳಿದಷ್ಟು ಬೆಲೆ ನೀಡಿ ಕಟಾವು ಮಾಡಿಕೊಂಡು ಹೋಗುತ್ತಿದ್ದರು. ಈಗ ನಮ್ಮನ್ನು ಕೇಳುವವರೇ ಇಲ್ಲದಂತಾಗಿದೆ. ಕಟಾವು ಮಾಡಿಕೊಂಡು ಹೋದ ದಾಳಿಂಬೆಯು ಮಾರಾಟವಾದ ಬಳಿಕ ಹಣ ಕೊಡುವುದಾಗಿ ಹೇಳುತ್ತಾರೆ. ಅವರ ಷರತ್ತಿಗೆ ಒಪ್ಪಿದರೆ ಮಾತ್ರ ಕಟಾವಿಗೆ ಬರುತ್ತಾರೆ ನಷ್ಟವಾದರೂ ಅನಿವಾರ್ಯವಾಗಿ ಅವರು ಕೇಳಿದ ಬೆಲೆಗೆ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೆಳೆಗಾರ ಬಸವರಾಜ ಅಳಲು ಹೇಳಿದರು.

ದೇವನಹಳ್ಳಿ ತಾಲ್ಲೂಕಿನಲ್ಲಿ 480 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗಿದೆ. ವರ್ಷದಿಂದ ವರ್ಷಕ್ಕೆ ಬೆಳೆಯುವ ಪ್ರಮಾಣ ಏರಿಕೆಯಾಗುತ್ತಿದೆ. ನಿರೀಕ್ಷೆ ಮೀರಿ ದಾಳಿಂಬೆ ಫಸಲು ಬಂದಿರುವುದೇ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯಲು ಕಾರಣ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು.

ಸರ್ಕಾರವು ಈ ಭಾಗದಲ್ಲಿ ಶೀಥಲಗೃಹ ನಿರ್ಮಿಸಿದರೆ ಕಟಾವಿನ ನಂತರ ಹಣ್ಣು ಸಂಗ್ರಹಿಸಿಟ್ಟು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ಅನುಕೂಲವಾಗಲಿದೆ
ಕೃಷ್ಣಪ್ಪ ದಾಳಿಂಬೆ ಬೆಳೆಗಾರ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.