ದೇವನಹಳ್ಳಿ: ಕುಂದಾಣ ಹೋಬಳಿಯ ರಾಮನಾಥಪುರ ಸಮೀಪದ ಕೆರೆಯಲ್ಲಿ ಭಾನುವಾರ ಮಧ್ಯಾಹ್ನ ಈಜಲು ತೆರಳಿದ್ದ ಬೆಂಗಳೂರಿನ ನಾಲ್ವರು ಯುವಕರ ಪೈಕಿ ಇಬ್ಬರು ಕರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ನಾಪತ್ತೆಯಾಗಿದ್ದಾರೆ.

ಬೆಂಗಳೂರಿನ ಆರ್.ಟಿ.ನಗರ ಹಾಗೂ ಚಾಮುಂಡಿ ನಗರದ ನಿವಾಸಿಗಳಾದ ಶೇಖ್ ತಾಹೀರ್, ತೌಹೀದ್, ಶಾಹೀದ್, ಫೈಜಲ್ ಖಾನ್ ಎಂಬ ಯುವಕರು ವಾರಾಂತ್ಯದ ಮೋಜಿಗೆ ದೇವನಹಳ್ಳಿ ಸಮೀಪದ ನಂದಿ ಬೆಟ್ಟಕ್ಕೆ ಬಂದಿದ್ದರು. ಅಲ್ಲಿಂದ ರಾಮನಾಥಪುರದ ಕೆರೆಗೆ ಈಜಲು ಬಂದಿದ್ದರು ಎಂದು ಹೇಳಲಾಗಿದೆ. ಈ ನಾಲ್ವರೂ 18–20 ವರ್ಷ ಆಸುಪಾಸಿನವರು.

ಭಾನುವಾರ ತಡರಾತ್ರಿವರೆಗೂ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಇಬ್ಬರು ಯುವಕರ ಶವಗಳು ಪತ್ತೆಯಾಗಿವೆ. ವಿಶ್ವನಾಥಪುರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಇನ್ನಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಕೆರೆಯ ದಡದಲ್ಲಿ ಸಂಜೆ ದ್ವಿಚಕ್ರ ವಾಹನ ಹಾಗೂ ಚಪ್ಪಲಿ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

‘ಮೊದಲಿಗೆ ಇಬ್ಬರು ಯುವಕರು ಈಜಲು ತೆರಳಿರುವ ಸಾಧ್ಯತೆ ಇದೆ. ಅವರು ಮುಳುಗುತ್ತಿರುವುದನ್ನು ಗಮನಿಸಿ ಮತ್ತಿಬ್ಬರು ಸ್ನೇಹಿತರು ಅವರ ನೆರವಿಗೆ ಧಾವಿಸಿರಬಹುದು’ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.