ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಯಲು ಕಾರಾಗೃಹದಲ್ಲಿ ಆರೋಗ್ಯ ತಪಾಸಣೆ

Published : 5 ಅಕ್ಟೋಬರ್ 2024, 15:41 IST
Last Updated : 5 ಅಕ್ಟೋಬರ್ 2024, 15:41 IST
ಫಾಲೋ ಮಾಡಿ
Comments

ವಿಜಯಪುರ(ದೇವನಹಳ್ಳಿ): ಹೋಬಳಿಯ ಕೋರಮಂಗಲ ಬಯಲು ಕಾರಾಗೃಹದಲ್ಲಿ ಆರೋಗ್ಯ ತಪಾಸಣೆ ಮತ್ತು ಅರಿವು ಕಾರ್ಯಕ್ರಮ ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಓರಲ್ ಹೆಲ್ತ್ ಪಾಲಿಸಿ ದಂತ ಭಾಗ್ಯ ಯೋಜನೆಯಡಿ ಹೊಸಕೋಟೆಯ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಬಂದಿಗಳಿಗೆ ದಂತ ಉಚಿತ ತಪಾಸಣೆ, ಬಾಯಿ ಆರೋಗ್ಯ ಅರಿವು ಮೂಡಿಸಲಾಯಿತು. 40 ಬಂದಿಗಳನ್ನು ಬೆಂಗಳೂರಿನ ಕೃಷ್ಣ ದೇವರಾಯ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ವೈದ್ಯರು ತಪಾಸಣೆ ನಡಸಿದರು.

ದಂತ ವೈದ್ಯ ಡಾ.ಉದಯ್ ಕುಮಾರ್ ದಂತ ಆರೋಗ್ಯದ ಕುರಿತು ಜಾಗೃತಿ ಮೂಡಿಸಿದರು. ಬಾಯಿ ಮತ್ತು ದಂತಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಗುಟ್ಕಾ, ಮಾದಕ ವಸ್ತುಗಳ ಸೇವನೆಯಿಂದ ವಿಮುಖರಾಗಬೇಕು. ತಂಬಾಕು ವಿಸರ್ಜಿಸಬೇಕು. ಆರೋಗ್ಯ ಪೂರ್ಣವಾದ ಆಹಾರವನ್ನು ಸೇವನೆ ಮಾಡಬೇಕು ಎಂದು ತಿಳಿಸಿದರು.

ಡಾ. ಜ್ಞಾನಕುಮಾರ್, ಡಾ.ವೀಣಾ, ಡಾ.ಮಾಲಿನಿ, ಡಾ.ಅಮಿತಾ, ಡಾ.ಸುಚಿತಾ, ಡಾ.ಮುರಳಿ, ಕಾರಾಗೃಹದ ಅಧೀಕ್ಷಕ ಮಂಜುನಾಥ್, ಜೈಲರ್ ಚಿಕ್ಕೊಪ್ಪ, ಎನ್.ರಮೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT