ಬೆಳಗಾವಿ: ಬಾಲಕೋಟೆ ಜಿಲ್ಲೆಯ ಇಳಕಲ್ ಮತಗಟ್ಟೆಯಿಂದ ತರಲಾದ ಮತಪೆಟ್ಟಿಗೆಯಲ್ಲಿ ಐದು ಮತಗಳು ಹೆಚ್ಚಿಗೆ ಬಂದಿವೆ. ಈ ಬಗ್ಗೆ ವಾಯವ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್.ಬಿ.ಬನ್ನೂರ ಚುನಾವಣಾಧಿಕಾರಿಗೆ ಆಕ್ಷೇಪ ಸಲ್ಲಿಸಿದ್ದರಿಂದ, ಆ ಪೆಟ್ಟಿಗೆಯನ್ನು ಪರಿಶೀಲನೆಗೆ ಪ್ರತ್ಯೇಕವಾಗಿ ಇಡಲಾಯಿತು.

'ಇಳಕಲ್ ಪಟ್ಟಣದ ಮತಕೇಂದ್ರದಲ್ಲಿ 71 ಮತಗಳು ಚಲಾವಣೆಯಾಗಿವೆ ಎಂದು ನಮೂದಿಸಲಾಗಿದೆ. ಆದರೆ, ಮತಪೆಟ್ಟಿಗೆಯಲ್ಲಿ 76 ಮತಪತ್ರಗಳು ಇವೆ. ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಅವರ ಪರವಾದ ಮತಗಳು ಇರಬಹುದು ಎಂಬ ಸಂದೇಹವಿದೆ. ಹೀಗಾಗಿ, ಆಕ್ಷೇಪ ಸಲ್ಲಿಸಿದ್ದೇನೆ' ಎಂದು ಎನ್.ಬಿ.ಬನ್ನೂರ ಮಾಧ್ಯಮದವರಿಗೆ ತಿಳಿಸಿದರು.

ಬೆಳಗಾವಿ: ಮತ ಎಣಿಕೆ ಟೇಬಲ್ ಮುಂದೆ ಅಭ್ಯರ್ಥಿಗಳ ಠಿಕಾಣಿ

'ಕೆಲವೊಮ್ಮೆ ಮತಪತ್ರಗಳ ಸಂಖ್ಯೆ ಬರೆಯುವ ಸಿಬ್ಬಂದಿ ಕೂಡ ತಪ್ಪು ಮಾಡಿರುವ ಸಾಧ್ಯತೆ ಇರುತ್ತದೆ. ಹಾಗಾಗಿ, ಹೆಚ್ಚು- ಕಡಿಮೆ ಕಂಡುಬಂದಲ್ಲ ಎಲ್ಲ ಅಭ್ಯರ್ಥಿಗಳೂ ಏಕ ಮನಸ್ಸಿನಿಂದ ತಕರಾರು ನೀಡಿದ್ದೇವೆ. ಒಂದೇ ಒಂದು ಮತ ವ್ಯತ್ಯಾಸ ಬಂದರೂ ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಕೊನೆಯಲ್ಲಿ ಈ ಗೊಂದಲ ಬಗೆಹರಿಸುವುದಾಗಿ ಚುನಾವಣಾಧಿಕಾರಿ ತಿಳಿಸಿದ್ದಾರೆ' ಎಂದೂ ಅವರು ಹೇಳಿದರು.

ಬೆಳಗಾವಿ: ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ ಹೊರಟ್ಟಿ ಮುನ್ನಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.