ಬೆಳಗಾವಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಕಿ ಆಕಸ್ಮಿಕದಿಂದ ಮನೆಗಳು ಸುಟ್ಟು ನಷ್ಟಕ್ಕೆ ಒಳಗಾಗಿದ್ದ ಕುಟುಂಬಗಳಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಧನಸಹಾಯ ಮಂಜೂರಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 9 ಮನೆಗಳಿಗೆ ತಲಾ ₹ 1 ಲಕ್ಷ ಮಂಜೂರು ಮಾಡಿದ್ದಾರೆ.

ತಾಲ್ಲೂಕಿನ ಹಲಗಾ, ಹಿರೇಬಾಗೇವಾಡಿ ಹಾಗೂ ಬಡಸ್ ಕೆ.ಎಚ್. ಗ್ರಾಮಗಳಲ್ಲಿ ಬೆಂಕಿ ಅವಘಡ ಉಂಟಾಗಿತ್ತು. ಮನೆಗಳು ಬೆಂಕಿಗೆ ಆಹುತಿಯಾಗಿದ್ದ ಹಿನ್ನೆಲೆಯಲ್ಲಿ ಸಂತ್ರಸ್ತರ ಕಷ್ಟದ ಕುರಿತು ಶಾಸಕರು ಈಚೆಗೆ ಮುಖ್ಯಮಂತ್ರಿ ಗಮನಸೆಳೆದಿದ್ದರು. ಮನವಿ ಸಲ್ಲಿಸಿದ್ದರು.

‘ಹಲಗಾದ ಶಾಂತಿನಾಥ ಚಿಕ್ಕಪರಪ್ಪ ದೇಸಾಯಿ, ನಭಿರಾಜ ಪಾಯಪ್ಪ ಚಿಕ್ಕಪರಪ್ಪ, ವಸಂತ ಜಿನ್ನಪ್ಪ ಚಿಕ್ಕಪರಪ್ಪ, ಸುನೀಲ ಜಿನ್ನಪ್ಪ ದೇಸಾಯಿ, ಭರತೇಶ ದೆವಪ್ಪ ಚಿಕ್ಕಪರಪ್ಪ, ಹಿರೇಬಾಗೇವಾಡಿಯ ಶಿವರಾಯಪ್ಪ ಸಿದ್ದಲಿಂಗಪ್ಪ ಗಾಣಗಿ, ಗಜೇಂದ್ರನಾಥ ಗುರಪ್ಪ ಅಗಸಿಮನಿ, ಚಂದ್ರಪ್ಪ ಅಪ್ಪಯಪ್ಪ ಅಗಸಿಮನಿ, ಮಂಜುನಾಥ ಅಪ್ಪಯ್ಯಪ್ಪ ಅಗಸಿಮನಿ ಹಾಗೂ ಬಡಸ್ ಕೆ.ಎಚ್. ಗ್ರಾಮದ ಮಾರುತಿ ರುದ್ರಪ್ಪ ಕರಡಿ ಅವರಿಗೆ ಪರಿಹಾರ ನೀಡಲಾಗುವುದು. ಶೀಘ್ರವೇ ಪರಿಹಾರದ ಚೆಕ್‌ಗಳನ್ನು ಹಸ್ತಾಂತರಿಸುತ್ತೇನೆ’ ಎಂದು ಹೆಬ್ಬಾಳಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.