ಚನ್ನಮ್ಮನ ಕಿತ್ತೂರು: ‘ಬಹಳ ದಿನಗಳ ಹಿಂದೆ ಆಪರೇಷನ್ ಕಮಲಕ್ಕಾಗಿ ಬಿಜೆಪಿಯ ಹಿರಿಯ ನಾಯಕರು ನನ್ನನ್ನು ಸಂಪರ್ಕಿಸಿದ್ದು ನಿಜ. ದುಡ್ಡಿನ ಆಮಿಷ ಒಡ್ಡಿರಲಿಲ್ಲ. ಸ್ಥಾನಮಾನ ನೀಡುವ ಬಗ್ಗೆ ಮಾತನಾಡಿದ್ದರು’ ಎಂದು ಕಾಂಗ್ರೆಸ್ನ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಕಾಂಗ್ರೆಸ್ನ ಶಾಸಕರಾದ ತಮ್ಮಯ್ಯ ಹಾಗೂ ಬಾಬಾಸಾಹೇಬ ಅವರಿಗೆ ಬಿಜೆಪಿ ಹಿರಿಯ ನಾಯಕರು ₹100 ಕೋಟಿ 'ಆಫರ್’ ನೀಡಿದ್ದಾರೆ ಎಂದು ಶಾಸಕ ರವಿ ಗಾಣಿಗ ನೀಡಿದ ಹೇಳಿಕೆಗೆ, ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಬಿಜೆಪಿ ನಾಯಕರು ಸಂಪರ್ಕಿಸಿದ್ದ ವಿಷಯವನ್ನು ಕಾಂಗ್ರೆಸ್ ನಾಯಕರ ಗಮನಕ್ಕೂ ತಂದಿದ್ದೇನೆ. ಕಾಂಗ್ರೆಸ್ ಸರ್ಕಾರ ನನ್ನ ಕ್ಷೇತ್ರಕ್ಕೆ ಅನುದಾನ ನೀಡಿದೆ. ಎಲ್ಲ ರೀತಿಯ ಸಹಕಾರವನ್ನು ಎಲ್ಲರೂ ನೀಡುತ್ತಿದ್ದಾರೆ. ಕಾಂಗ್ರೆಸ್ ತೊರೆಯುವ ವಿಚಾರವೇ ಇಲ್ಲಿ ಬರುವುದಿಲ್ಲ’ ಎಂದರು.

‘ನಾನೇನು ಮಾರಾಟಕ್ಕಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನನ್ನ ನಿಷ್ಠೆ ಇದೆ’ ಎಂದೂ ಪುನರುಚ್ಛರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.