ಕೆ.ಜಿ. ಕುಂದಣಗಾರ ವೇದಿಕೆ(ಮೂಡಲಗಿ): ಶಾಸಕರು ಮತ್ತು ಸಂಸದರ ಅನುದಾನದಲ್ಲಿ ಶೇ 5ರಷ್ಟು ಹಣವನ್ನು ಕನ್ನಡ ಕೈಂಕರ್ಯಕ್ಕೆ ಬಳಸಬೇಕು ಸೇರಿದಂತೆ 6 ನಿರ್ಣಯಗಳನ್ನು ಇಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅಂಗೀಕರಿಸಲಾಯಿತು.

ರಾಜ್ಯದ ಆಡಳಿತದಲ್ಲಿ ಕನ್ನಡ ಅಂಕಿಗಳನ್ನೇ ಬಳಸಬೇಕು. ರಾಜ್ಯ ಸರ್ಕಾರದ ಎಲ್ಲ ರೀತಿಯ ಕಾಗದ ಪತ್ರಗಳಲ್ಲೂ ಕನ್ನಡಕ್ಕೆ ಆದ್ಯತೆ ಕೊಡಬೇಕು. ಕರ್ನಾಟಕದಲ್ಲಿ ಎಲ್ಲ ವೈದ್ಯರು ಕನ್ನಡ ಭಾಷೆಯಲ್ಲೇ ಔಷಧ ಚೀಟಿ ನೀಡುವಂಥ ನಿಯಮ ರೂಪಿಸಬೇಕು. ನ್ಯಾಯಾಲಯದ ಆದೇಶಗಳನ್ನೂ ಕನ್ನಡದಲ್ಲೇ ಹೊರಡಿಸಬೇಕು. ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ 75ರಷ್ಟು ಮೀಸಲಾತಿ ನೀಡಬೇಕು ಎನ್ನುವ ನಿರ್ಣಯಗಳನ್ನು ಕ.ಸಾ.ಪ ಮೂಡಲಗಿ ಘಟಕದ ಕಾರ್ಯದರ್ಶಿ ಎ.ಎಚ್.ಒಂಟಗೋಡಿ ಮಂಡಿಸಿದರು.

ಸಮ್ಮೇಳನದ ಅಧ್ಯಕ್ಷ ಪ್ರೊ.ಚಂದ್ರಶೇಖರ ಅಕ್ಕಿ, ‘ಈ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿದ್ದು ನನ್ನ ಬದುಕಿಗೆ ಸಾರ್ಥಕತೆ ತಂದಿದೆ. ಮೂಡಲಗಿಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಕೊಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಒಪ್ಪಿಗೆ ಸೂಚಿಸಿದ್ದಾರೆ. ತ್ವರಿತವಾಗಿ ಅದು ಸಾಕಾರವಾಗಲಿ’ ಎಂದು ಆಶಿಸಿದರು.

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ‘ಸಾಹಿತ್ಯ ಸಮ್ಮೇಳನಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿ’ ಎಂದು ಅಭಿಪ್ರಾಯಪಟ್ಟರು.

ಸಮಾರೋಪ ನುಡಿಗಳನ್ನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ, ‘ಚಂದ್ರಶೇಖರ ಅಕ್ಕಿ ಕಳೆದ ಐದು ದಶಕಗಳಿಂದ ಸಾಹಿತ್ಯ ಕೃಷಿ ಮಾಡಿದ್ದಾರೆ. ಅವರು ಸಮ್ಮೇಳನದ ಅಧ್ಯಕ್ಷ ಆಗಿರುವುದು ಇಡೀ ಗೋಕಾವಿ ನಾಡಿಗೆ ಹೆಮ್ಮೆಯ ಸಂಗತಿ’ ಎಂದರು.

ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಮುನ್ಯಾಳ–ರಂಗಾಪುರದ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಪ್ರೊ. ಎಸ್.ಎಂ.ಕಮದಾಳ, ಜಯಾನಂದ ಮಾದರ, ವಿ.ಎಸ್.ಹಂಚಿನಾಳ, ಆರ್.ಟಿ. ಲಂಕೆಪ್ಪನವರ, ಆರ್.ಎಸ್.ಅಳಗುಂಡಿ, ಎಸ್.ಎಂ. ಲೋಕನ್ನವರ, ಎಂ.ಜಿ.ಮಾವಿನಗಿಡದ, ಸುರೇಶ ಹನಗಂಡಿ, ಪರಿಷತ್ ಮೂಡಲಗಿ ತಾಲ್ಲೂಕು ಘಟಕದ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ, ಮಹಾಂತೇಶ ಮೆಣಸಿನಕಾಯಿ, ಸುನೀಲ ಹಲವಾಯಿ, ವೀರಭದ್ರ ಅಂಗಡಿ, ಬಿ.ವೈ. ಶಿವಾಪುರ, ಬಸವರಾಜ ತರಕಾರ ಇದ್ದರು.

ಭಾರತಿ ಮದಬಾವಿ ಸ್ವಾಗತಿಸಿದರು. ನಿಂಗಪ್ಪ ಸಂಗ್ರೋಜಿಕೊಪ್ಪ ನಿರೂಪಿಸಿದರು. ತಮ್ಮಣ್ಣ ಕಾಮಣ್ಣವರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.