ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಫೆಬ್ರುವರಿಯಲ್ಲಿ ನಂದಗಡ ಗ್ರಾಮದೇವಿ ಜಾತ್ರೆ’

Published : 24 ಸೆಪ್ಟೆಂಬರ್ 2024, 14:29 IST
Last Updated : 24 ಸೆಪ್ಟೆಂಬರ್ 2024, 14:29 IST
ಫಾಲೋ ಮಾಡಿ
Comments

ಖಾನಾಪುರ: ತಾಲ್ಲೂಕಿನ ನಂದಗಡ ಗ್ರಾಮದ ಗ್ರಾಮದೇವಿ ಜಾತ್ರೆ 2025ರ ಫೆಬ್ರುವರಿ ತಿಂಗಳಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಜಾತ್ರಾ ಸಮಿತಿ ರಚನೆಯಾಗಿದೆ. ಜಾತ್ರೆಯ ಪೂರ್ವ ಸಿದ್ಧತೆಗಳು ಪ್ರಾರಂಭಗೊಂಡಿವೆ ಎಂದು ಗ್ರಾಮದ ಹಿರಿಯ ಅಡಿವೆಪ್ಪ ಕೋಟಿ ಹೇಳಿದರು.

ಮಂಗಳವಾರ ಗ್ರಾಮದಲ್ಲಿ ಜರುಗಿದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ನಂದಗಡ ಗ್ರಾಮದೇವಿ ಜಾತ್ರೆ 1999ರಲ್ಲಿ ನಡೆದಿತ್ತು. ಈಗ 25 ವರ್ಷಗಳ ನಂತರ ನಡೆಯಲಿದೆ. ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ’ ಎಂದು ವಿವರಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ನಂದಗಡ ಜಾತ್ರಾ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮದ ಹಿರಿಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಬಳಿಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ನಂದಗಡ ಗ್ರಾಮಸ್ಥ ಮಹಾಂತೇಶ ರಾಹೂತ ಅವರನ್ನು ಜಾತ್ರಾ ಸಮಿತಿ ವತಿಯಿಂದ ಗೌರವರಿಸಲಾಯಿತು.

ಜಾತ್ರಾ ಸಮಿತಿ ಅಧ್ಯಕ್ಷ ಸುಭಾಸ ಪಾಟೀಲ, ಉಪಾಧ್ಯಕ್ಷ ವಿಜಯ ಅರಗಾವಿ, ರಾಜು ಕಬ್ಬೂರ, ಡಾ.ರಮೇಶ ಪಾಟೀಲ, ಮಹಾಂತೇಶ ವಾಲಿ, ಶಂಕರ ಸೋನೊಳ್ಳಿ, ಸುಧೀರ ಕಬ್ಬೂರ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT