ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಯಾವುದೇ ಬದಲಾವಣೆಗೆ ಸಮಂಜಸ ದಿನವಾಗಿರುವುದಿಲ್ಲ
Published 23 ಸೆಪ್ಟೆಂಬರ್ 2024, 21:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಪುಣ್ಯ ಸಂಪಾದನೆಗೆ ದಾನ-ಧರ್ಮ ಮಾಡುವ ಮನೋಭಾವ ಬೆಳೆಸಿಕೊಳ್ಳಿರಿ. ಯಾವುದೇ ಬದಲಾವಣೆಗೆ ಸಮಂಜಸ ದಿನವಾಗಿರುವುದಿಲ್ಲ.
ವೃಷಭ
ರಾಜಕೀಯ ರಂಗದಲ್ಲಿ ದಾಳ ಉರುಳಿದ್ದೇ ಗೊತ್ತಾಗದಂತೆ ಸಂಚು ನಡೆಯಲಿದೆ. ಮೇಲುಸ್ತುವಾರಿಯಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ಸಾಗುವುದು. ಬಂಡವಾಳ ಹೂಡುವಂತೆ ಮಗನಿಂದ ಒತ್ತಾಯ ಹೆಚ್ಚಲಿದೆ.
ಮಿಥುನ
ಮಕ್ಕಳ ಕೆಲಸಗಳ ಬಗ್ಗೆ ನೆರೆಯವರಿಂದ ಪ್ರಶಂಸೆಯ ಮಾತು ಕೇಳಿ ಆನಂದವಾಗುತ್ತದೆ. ವಾಣಿಜ್ಯ ಬೆಳೆಗಳನ್ನು ದಾಸ್ತಾನು ಮಾಡಿಕೊಳ್ಳುವ ಯೋಚನೆ ಸರಿಯಾದದ್ದಾಗಿರುತ್ತದೆ. ಸಂಸಾರದ ಜವಾಬ್ದಾರಿ ಹೆಚ್ಚಲಿದೆ.
ಕರ್ಕಾಟಕ
ಮೊಬೈಲ್ ಫೋನ್‌ಗಳ ಅಥವಾ ಕಂಪ್ಯೂಟರ್‌ಗಳ ಮಾರಾಟ ಗಾರರಿಗೆ ಅಥವಾ ರಿಪೇರಿ ಮಾಡುವವರಿಗೆ ಆದಾಯ ಕಂಡು ಬರುತ್ತದೆ. ದಕ್ಷಿಣಾಮೂರ್ತಿಯ ಆರಾಧನೆಯಿಂದ ಯಶಸ್ಸಿನ ದಾರಿ ತೋರಲಿದೆ.
ಸಿಂಹ
ಬರಹಗಾರರಿಗೆ ತಮ್ಮ ಬರವಣಿಗೆಯ ಮೇಲೆ ಆಕ್ಷೇಪವನ್ನು ವ್ಯಕ್ತಪಡಿಸುವ ಜನರ ಮಧ್ಯದಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಬಹುದು. ಸ್ವಾವಲಂಬಿಯಾಗಿರಲು ಪ್ರಯತ್ನಿಸಿ.
ಕನ್ಯಾ
ಆಡಳಿತಾತ್ಮಕ ವಿಚಾರದಲ್ಲಿ ಭಾರಿ ಬದಲಾವಣೆಗಳ ಅಗತ್ಯಗಳನ್ನು ಸಂಸ್ಥಾಪಕರಿಗೆ ಮನವರಿಕೆ ಮಾಡಿಕೊಡುವಿರಿ. ವೈದ್ಯ ವೃತ್ತಿಯವರಿಗೆ ಲಾಭದ ದಿನ. ಹೆಂಡತಿಯ ಮಾತು ಈ ದಿನ ಮುಖ್ಯವೆನಿಸುತ್ತದೆ.
ತುಲಾ
ನಿರುದ್ಯೋಗಿಗಳಿಗೆ ಹೊರ ರಾಜ್ಯವೊಂದರಲ್ಲಿ ಕೆಲಸ ನಿರ್ವಹಿಸುವ ಅವಕಾಶ ಎದುರಾದರೆ ಒಪ್ಪಿಕೊಳ್ಳುವುದು ಉತ್ತಮ. ಆಲಸ್ಯದ ಸ್ವಭಾವ ಹೆಚ್ಚಾಗಿರುವುದರಿಂದ ಕೆಲಸವು ಬಾಕಿ ಉಳಿಯಲಿದೆ.
ವೃಶ್ಚಿಕ
ಬಟ್ಟೆ ವ್ಯಾಪಾರಿಗಳಿಗೆ ಉತ್ತಮ ಮಾರಾಟ ಹಾಗೂ ಲಾಭವಾಗುವುದು. ಹಾಲು ಅಥವಾ ಹಾಲಿನ ಪದಾರ್ಥ ಮಾರಾಟಗಾರರಿಗೆ ಲಾಭವಾಗುವುದು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮೇಲುಗೈ ಸಾಧಿಸಬಹುದು.
ಧನು
ಮಕ್ಕಳ ಅಭಿವೃದ್ಧಿ ಅಥವಾ ಅವರ ಕೆಲಸಗಳ ಬಗ್ಗೆ ನೆರೆಯವರಿಂದ ಪ್ರಶಂಸೆಯ ಮಾತು ಕೇಳಿ ಆನಂದವಾಗುತ್ತದೆ. ಅನಿರೀಕ್ಷಿತವಾಗಿ ಹಳೆಯ ಸ್ನೇಹಿತರ ಭೇಟಿಯಾಗಲಿದೆ. ಆಫೀಸಿನ ಕೆಲಸಗಳು ಬೇಗನೇ ಮುಗಿಯುವುದು.
ಮಕರ
ವೃತ್ತಿಗೆ ಸಂಬಂಧಿಸಿದಂತೆ ಶತ್ರುಬಾಧೆ ಎದುರಾಗಬಹುದು. ದೈಹಿಕ ಮತ್ತು ಧಾರ್ಮಿಕ ಪ್ರಯತ್ನದಿಂದ ಸುಧಾರಿಸಿಕೊಳ್ಳಬಹುದು. ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳ.
ಕುಂಭ
ಕೌಟುಂಬಿಕವಾಗಿ ಜವಾಬ್ದಾರಿಗಳನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡುವ tuesdಬಗ್ಗೆ ಗಮನಹರಿಸಿ. ಸಮಯ ಪಾಲನೆ ಮಾಡುವುದನ್ನು ಜೀವನದಲ್ಲಿ ರೂಢಿಸಿಕೊಳ್ಳಿ. ಹಣಕಾಸಿನ ಸ್ಥಿತಿಯು ನಷ್ಟದ ದಾರಿಯನ್ನು ನೋಡುವುದು.
ಮೀನ
ಹಿರಿಯರ ಭೇಟಿಯಿಂದಾಗಿ ಕುಟುಂಬದ ಬಗೆಗಿನ ವಿಚಾರಗಳು ತಿಳಿಯಲಿವೆ. ಆರಿಸಿಕೊಂಡ ಮಾರ್ಗದಲ್ಲಿ ಸರಿ ತಪ್ಪುಗಳ ಬಗ್ಗೆ ಯೋಚಿಸಿ ಏಕಾಗ್ರತೆಯಿಂದ ಮುನ್ನಡೆಯಿರಿ. ವಿಶೇಷ ಉಡುಗೊರೆ ದೊರಕಬಹುದು.
ADVERTISEMENT
ADVERTISEMENT