ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲ: ಹಿಂದೂಸ್ತಾನ ಸೊಸೈಟಿಗೆ ₹13.48 ಲಕ್ಷ ಲಾಭ

Published : 23 ಸೆಪ್ಟೆಂಬರ್ 2024, 13:18 IST
Last Updated : 23 ಸೆಪ್ಟೆಂಬರ್ 2024, 13:18 IST
ಫಾಲೋ ಮಾಡಿ
Comments

ಬೈಲಹೊಂಗಲ: ಪಟ್ಟಣದ ದಿ.ಹಿಂದೂಸ್ತಾನ ಮೈನಾರಿಟಿ ವಿವಿಧೋದ್ದೇಶ ಕೋ.ಆಫ್‌ ಸೊಸೈಟಿ 2023-24 ನೇ ಸಾಲಿನಲ್ಲಿ ಒಟ್ಟು ₹13.48 ಲಕ್ಷ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಮಹ್ಮದಸಾಹೇಬ ನದಾಫ ಹೇಳಿದರು.

ಪಟ್ಟಣದ ಮೌಲಾನಾ ಅಬುಲ್ ಕಲಾಂ ಅಜಾದ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ನಡೆದ 21ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ನದಾಫ-ಪಿಂಜಾರ ರಹೆಬರ ಫೌಂಡೇಷನ್ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೊಸೈಟಿ 1464 ಸದಸ್ಯರನ್ನು ಹೊಂದಿದ್ದು, ಶೇರು ಬಂಡವಾಳ ₹37.24 ಲಕ್ಷ, ದುಡಿಯುವ ಬಂಡವಾಳ ₹7.28 ಕೋಟಿ ಹೊಂದಿದೆ ಎಂದರು.

ನದಾಫ-ಪಿಂಜಾರ ಸಮಾಜದ ತಾಲ್ಲೂಕು ಘಟಕ ಅಧ್ಯಕ್ಷ ಅಬ್ದುಲಕಲಾಂ ಅಜಾದ ನದಾಫ, ಕಿತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ತುಬಾಕಿ, ಕ್ಷೇತ್ರ ಸಮನ್ವಯ ಅಧಿಕಾರಿ ಬಿ.ಎನ್.ಕಸಾಳೆ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು, ಸಮಾಜ ಸೇವಕರನ್ನು ರಹೇಬರ ಫೌಂಡೇಷನ್ ವತಿಯಿಂದ ಸತ್ಕರಿಸಲಾಯಿತು.

ಶಿಕ್ಷಕ ಆರ್.ಎಂ.ಹೋಟಕರ, ಅನ್ವರಹುಸೇನ ಪಾಟೀಲ, ಶೌಕತಅಲಿ ಬುಡ್ರಕಟ್ಟಿ, ವಕೀಲ ಈರಪ್ಪ ಹುಣಶಿಕಟ್ಟಿ, ರಹೇಬರ್ ಫೌಂಡೇಶನ ಬುಡ್ಡೇಸಾಬ ಮದಲಮಟ್ಟಿ, ಸಾಜಿದ ಬಾಬನ್ನವರ, ಸತ್ತಾರ ಅಹಮದ ನದಾಫ, ಫಕ್ರುಸಾಬ ಕುಸಲಾಪುರ, ಮಲೀಕ ನದಾಫ, ಫಾರುಕ ಅಂಕಲಗಿ, ಶರೀಫ ನದಾಫ, ಸೈಯದ ಅಡಿಮನಿ, ಬಸಿರ ಮದಲಮಟ್ಟಿ, ಬಾಬು ಕುಲುಮನಟ್ಟಿ, ವಾಸಿಮ ಅಂಕಲಗಿ, ಶಬ್ಬೀರ ಮದಲಮಟ್ಟಿ, ರಫೀಕ ಹಳೇಮನಿ,ಮಲೀಕ ಕುಸಲಾಪುರ, ಜಮೀಲ ಮದಲಮಟ್ಟಿ, ಶಬ್ಬೀರ ನದಾಫ, ಮೈನು ನದಾಫ, ಜಾಫರ್ ಅಡಿಮನಿ, ರಿಯಾಜ ನದಾಫ, ಸುಭಾನಿ ನದಾಫ, ಬುಡ್ದೆಸಾಬ ಕುಸಲಾಪುರ, ಶಿರಾಜ ಮದಲಮಟ್ಟಿ, ಅಜರುದ್ದಿನ ನದಾಫ, ಸಲೀಮ ನದಾಫ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT