ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌: ಲಂಕಾ ಗೆಲುವಿನಲ್ಲಿ ಮಿಂಚಿದ ಪ್ರಭಾತ್

Published : 23 ಸೆಪ್ಟೆಂಬರ್ 2024, 13:58 IST
Last Updated : 23 ಸೆಪ್ಟೆಂಬರ್ 2024, 13:58 IST
ಫಾಲೋ ಮಾಡಿ
Comments

ಗಾಲೆ (ಶ್ರೀಲಂಕಾ): ಎಡಗೈ ಸ್ಪಿನ್ನರ್‌ ಪ್ರಭಾತ್ ಜಯಸೂರ್ಯ ಅವರ ಐದು ವಿಕೆಟ್‌ಗಳ ಗೊಂಚಲಿನ ನೆರವಿನಿಂದ ಶ್ರೀಲಂಕಾ ತಂಡ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು 63 ರನ್‌ಗಳಿಂದ ಸೋಲಿಸಿತು.

ಗೆಲ್ಲಲು 275 ರನ್ ಗಳಿಸಬೇಕಾಗಿದ್ದ ನ್ಯೂಜಿಲೆಂಡ್ ತಂಡ ಕೊನೆಯ ದಿನದಾಟ (ಭಾನುವಾರ: 8 ವಿಕೆಟ್‌ಗೆ 207) ಆರಂಭವಾಗಿ 15 ನಿಮಿಷಗಳಲ್ಲಿ 211 ರನ್‌ಗಳಿಗೆ ಆಲೌಟ್‌ ಆಯಿತು. 91 ರನ್‌ಗಳೊಂದಿಗೆ ಅಜೇಯರಾಗಿದ್ದ ರಚಿನ್ ರವೀಂದ್ರ ಮೊದಲಿಗರಾಗಿ ನಿರ್ಗಮಿಸಿದರು. ಅವರು ನಿನ್ನೆಯ ಮೊತ್ತಕ್ಕೆ ಒಂದು ರನ್ ಸೇರಿಸಿ ಜಯಸೂರ್ಯ (68ಕ್ಕೆ5) ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ನಂತರ ಅವರು ವೇಗಿ ವಿಲಿಯಮ್ ಓ ರೂರ್ಕಿ ಅವರನ್ನು ಬೌಲ್ಡ್ ಮಾಡಿ ಪಂದ್ಯಕ್ಕೆ ತೆರೆಯೆಳೆದರು.

ಚೆಂಡಿಗೆ ತುಂಬಾ ತಿರುವು ನೀಡುತ್ತಿದ್ದ ಗಾಲೆಯ ಪಿಚ್‌ನಲ್ಲಿ ರವೀಂದ್ರ ಏಕಾಂಗಿಯಾಗಿ ಹೋರಾಟ ನಡೆಸಿದರು. ಅವರ 92 ರನ್‌ಗಳಲ್ಲಿ (168 ಎ) ಒಂದು ಸಿಕ್ಸರ್‌, 9 ಬೌಂಡರಿಗಳಿದ್ದವು. ಗಾಲೆಯಲ್ಲಿ ಕಿವೀಸ್ ತಂಡ ಈ ಹಿಂದೆ ಆಡಿದ್ದ ನಾಲ್ಕೂ ಪಂದ್ಯಗಳಲ್ಲೂ ಸೋಲನುಭವಿಸಿತ್ತು. ಗಾಲೆಯಲ್ಲಿ ಈ ಹಿಂದೆ ರಾಸ್ ಟೇಲರ್ ಗಳಿಸಿದ್ದ 89 ರನ್‌ಗಳು ನ್ಯೂಜಿಲೆಂಡ್‌ ಆಟಗಾರನೊಬ್ಬನ ಅತ್ಯಧಿಕ ಮೊತ್ತ ಎನಿಸಿದ್ದು, ರಚಿನ್ ಅದನ್ನು ಮೀರಿದರು.

ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಇದೇ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಶ್ರೀಲಂಕಾ 305, ನ್ಯೂಜಿಲೆಂಡ್‌: 340; ಎರಡನೇ ಇನಿಂಗ್ಸ್‌: ಶ್ರೀಲಂಕಾ: 94.2 ಓವರುಗಳಲ್ಲಿ 309; ನ್ಯೂಜಿಲೆಂಡ್‌: 71.4 ಓವರುಗಳಲ್ಲಿ 211 (ರಚಿನ್ ರವೀಂದ್ರ 92, ಟಾಮ್‌ ಬ್ಲಂಡೆಲ್ 30; ರಮೇಶ್ ಮೆಂಡಿಸ್‌ 83ಕ್ಕೆ3, ಪ್ರಭಾತ್ ಜಯಸೂರ್ಯ 68ಕ್ಕೆ5). ಪಂದ್ಯದ ಆಟಗಾರ: ಪ್ರಭಾತ್ ಜಯಸೂರ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT