ಹಿರೇಬಾಗೇವಾಡಿ: ಗಾಂಜಾ ಮಾರಾಟ ಮಾಡುತ್ತಿದ್ದ ಕಿತ್ತೂರು ತಾಲ್ಲೂಕಿನ ದೇವರ ಶೀಗೆಹಳ್ಳಿ ಗ್ರಾಮದ ಶ್ರೇಯಾಂಶ ಗಂಗಪ್ಪ ಬೂದ್ನೂರ (32) ಎಂಬಾತನನ್ನು ಹಿರೇಬಾಗೇವಾಡಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಡೇಕೊಳ್ಳ ಕ್ರಾಸ್ ಬಳಿಯ ಕೆಳ ಸೇತುವೆಯ ಬಳಿ ಬಂಧಿಸಿ ₹ 60,000 ಮೌಲ್ಯದ 4.3 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮತ್ತೊಬ್ಬ ಆರೋಪಿ ಮಾರ್ಗನಕೊಪ್ಪ ಗ್ರಾಮದ ಆಜಾದ ಇಸ್ಮಾಯಿಲ್ ಸನದಿ ಎಂಬಾತನ ಶೋಧ ಕಾರ್ಯ ಮುಂದುವರೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಟಿ.ಬಿ.ನೀಲಗಾರ, ಪಿಎಸ್ಐ ಅವಿನಾಶ ಎ.ವೈ ಸಿಬ್ಬಂದಿಯಾದ ಬಿ.ಸಿ.ಗುನ್ನಗೋಳ, ಎಸ್.ಬಿ.ಬಾಬಣ್ಣವರ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.