ಗೋಕಾಕ: ಇಲ್ಲಿನ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾ ಅಧಿಕಾರಿ ಬಿ.ಕೆ.ಗೋಖಲೆ ಪ್ರಕಟಿಸಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ‘ಅ’ ವರ್ಗದಿಂದ ಸುಣಧೋಳಿಯ ಬಸಪ್ಪ ಲಕ್ಷ್ಮಪ್ಪ ಕುರಿಗಾಬಿ, ಗೊಡಚಿನಮಲ್ಕಿಯ ಮಹಾಂತೇಶ ಬಾಳಪ್ಪ ಅವರಗೋಳ, ಅರಭಾವಿಯ ಮುತ್ತೆಪ್ಪ ಸಣ್ಣಧರೆಪ್ಪ ಜಲ್ಲಿ, ತುಕ್ಕಾನಟ್ಟಿಯ ಸಿದ್ಧಪ್ಪ ಶಿವಮೂರ್ತಿ ಹಮ್ಮನವರ, ಸುಬಾಷ ಗಿರೆಪ್ಪ ಢವಳೇಶ್ವರ, ವೈಯಕ್ತಿಕ ಸದಸ್ಯರ ‘ಬ’ ವರ್ಗದ ಸಾಮಾನ್ಯ ಕ್ಷೇತ್ರದಿಂದ ಕುಲಗೋಡದ ಅಶೋಕ ಮುದಕಪ್ಪ ನಾಯಿಕ, ರಾಜಾಪೂರದ ವಿಠ್ಠಲ ಉದ್ದಪ್ಪ ಪಾಟೀಲ, ಮಹಿಳಾ ಕ್ಷೇತ್ರದಿಂದ ಅರಭಾವಿಯ ಗಂಗವ್ವ ಸಾತಪ್ಪ ಜೈನ, ಅಕ್ಕತಂಗೇರಹಾಳದ ಲುಬನಾ ಗೌಸಮೋದ್ದೀನ ದೇಸಾಯಿ, ಹಿಂದುಳಿದ ‘ಅ’ ಕ್ಷೇತ್ರದಿಂದ ಖಾನಟ್ಟಿಯ ವೆಂಕನಗೌಡ ಬಾಲಗೌಡ ಪಾಟೀಲ, ‘ಬ’ ವರ್ಗದ ಕ್ಷೇತ್ರದಿಂದ ಮೆಳವಂಕಿಯ ಬಸಗೌಡ ದುಂಡನಗೌಡ ಪಾಟೀಲ, ‘ಬ’ ವರ್ಗ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಮೂಡಲಗಿಯ ಪ್ರಭಾಕರ ತಾಯಿ ರತ್ನವ್ವ ಬಂಗೆನ್ನವರ ಮತ್ತು ಪರಿಶಿಷ್ಟ ಪಂಗಡದಿಂದ ಗೋಕಾಕದ ಸುರೇಶ ಭೀಮಶಿ ಗುಡ್ಡಾಕಾರ ಅವರು ಅವಿರೋಧ ಆಯ್ಕೆಗೊಂಡಿದ್ದಾರೆ.

ಮುಂದಿನ ಐದು ವರ್ಷಗಳ ಅವಧಿಗೆ ಫೆ. 24ರಂದು ಆಡಳಿತ ಮಂಡಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ ಎಲ್ಲ ಸ್ಥಾನಗಳಿಗೂ ತಲಾ ಒಬ್ಬೊಬರೇ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಎಲ್ಲರೂ ಅವಿರೋಧ ಆಯ್ಕೆಗೊಂಡಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಅವಿರೋಧ ಆಯ್ಕೆ ನಡೆದಿದೆ ಎಂದು ಅರಭಾವಿ ಶಾಸಕರ ಆಪ್ತ ಸಹಾಯಕರಾದ ಲಕ್ಕಪ್ಪ ಲೋಕುರಿ ಮತ್ತು ನಿಂಗಪ್ಪ ಕುರಬೇಟ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.