ಬೆಂಗಳೂರು: ವಾರಾಣಸಿಯಿಂದ ಮೈಸೂರಿಗೆ ಹೊರಟಿದ್ದ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹ 60 ಲಕ್ಷ ಮೌಲ್ಯದ ವಿದೇಶಿ ತಯಾರಿಕೆಯ ಸಿಗರೇಟ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಇತ್ತೀಚೆಗೆ ಇಲ್ಲಿನ ರೈಲು ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.

‘ಸಿಗರೇಟ್ ಸೇವನೆ ಆರೋಗ್ಯ ಹಾನಿಕರ’ ಎಂಬ ಚಿತ್ರಸಹಿತ ಎಚ್ಚರಿಕೆ ಹಾಕದ ಈ ಸಿಗರೇಟ್‌ಗಳನ್ನು ಎಂ +ಮಾರ್ಕಿನಡಿ 40 ಕಾರ್ಟನ್‌ಗಳಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಮೂರು ಲಕ್ಷ ಸಿಗರೇಟ್‌ಗಳಿದ್ದ ಕಾರ್ಟನ್‌ಗಳ ಮೇಲೆ ಸೀರೆಗಳೆಂದು ಬರೆಯಲಾಗಿತ್ತು.

ತನಿಖಾ ಸಂಸ್ಥೆಗಳನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಸುಳ್ಳು ವಿಳಾಸ ಹಾಕಲಾಗಿತ್ತು. ಚಿತ್ರ ಸಹಿತ ಎಚ್ಚರಿಕೆ ಸಂದೇಶಗಳಿಲ್ಲದ ಸಿಗರೇಟ್ ಮಾರಾಟ ಅಕ್ರಮವಾಗಿದೆಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.

ಸಿಗರೇಟ್ ಮತ್ತಿತರ ತಂಬಾಕು ಪದಾರ್ಥಗಳ ಪ್ಯಾಕೇಜಿಂಗ್ ಹಾಗೂ ಲೇಬಲಿಂಗ್ ತಿದ್ದುಪಡಿ ಕಾಯ್ದೆ 2017ರ ಅನ್ವಯ ಅಕ್ರಮ ಸಿಗರೇಟ್‌ಗಳ ಮಾರಾಟವನ್ನು ನಿಷೇಧಿಸಲಾಗಿದೆ. ರಾಜ್ಯಕ್ಕೆ ಹಡಗು ಹಾಗೂ ರೈಲುಗಳಲ್ಲಿ ಅಕ್ರಮವಾಗಿ ಬರುವ ಪದಾರ್ಥಗಳ ಮೇಲೆ ಕಸ್ಟಮ್ಸ್ ಇಲಾಖೆ ತೀವ್ರ ನಿಗಾ ವಹಿಸಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.