ಬೆಂಗಳೂರು: 89ನೇ ಅಖಿಲ ಭಾರತ ಬಂಗಾಳಿ ಸಾಹಿತ್ಯ ಸಮ್ಮೇಳನವನ್ನು ಡಿ.25ರಿಂದ 27ರವರೆಗೆ ದೂರವಾಣಿನಗರದ ಐಟಿಐ ವಿದ್ಯಾಮಂದಿರದಲ್ಲಿ ಏರ್ಪಡಿಸಲಾಗಿದೆ.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಬಂಗಾಳಿ ಸಾಹಿತ್ಯ ಸಂಸ್ಥೆಯ ಕಾರ್ಯದರ್ಶಿ ಮನೋಮಿತ ರಾಯ್, ‘ಸಮ್ಮೇಳನದಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಸಾಹಿತ್ಯ ಕಾರ್ಯಕ್ರಮಗಳು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ’ ಎಂದರು.

‘26ರ ಬೆಳಿಗ್ಗೆ 8ಗಂಟೆಗೆ ಸ್ನೇಹ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬಂಗಾಳಿ ಸಾಹಿತ್ಯದೊಂದಿಗೆ ಕನ್ನಡ ಸಾಹಿತ್ಯದ ನಂಟು, ಬಂಗಾಳೇತರರಿಗೂ ಬಂಗಾಳಿ ಸಾಹಿತ್ಯ ಪರಿಚಯ ಕುರಿತ ಗೋಷ್ಠಿಗಳು ನಡೆಯಲಿವೆ’.

‘ಕನ್ನಡ, ಬಂಗಾಳಿ ಮತ್ತು ಹಿಂದಿ ಸಾಹಿತಿಗಳ ವಿಶೇಷ ಸಂವಾದ ಏರ್ಪಡಿಸಲಾಗಿದೆ. ಸಾಹಿತಿ ಚಂದ್ರಶೇಖರ ಕಂಬಾರ, ವಿವೇಕ್ ಶಾನಭಾಗ, ಪ್ರತಿಭಾ ನಂದಕುಮಾರ್, ರಾಜೇಶ್ವರಿ ಚಟ್ಟೋಪಾಧ್ಯಾಯ, ಹರಿ ರವಿಕುಮಾರ್ ಭಾಗವಹಿಸಲಿದ್ದಾರೆ’.

‘ಬಂಗಾಳಿ ರಂಗಭೂಮಿ ಕಲಾವಿದ ನಾಸಿರುದ್ದೀನ್ ಭಟ್ಟಾಚಾರ್ಯ, ಸಾಹಿತಿ ವಿನಾಯಕ್ ಬಂಡೋಪಾಧ್ಯಾಯ, ಚೈತಾಲಿ ಮುಖರ್ಜಿ, ಪ್ರಸಾರ ಭಾರತಿ ಸಿಇಒ ಜವಾಹರ್ ಸರ್ಕಾರ್, ರಾಮ್‌ಗುಲಾಲ್ ಘೋಷ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

1959ರಲ್ಲಿ ಮೊದಲ ಬಾರಿಗೆ ನಗರದಲ್ಲಿ ಬಂಗಾಳಿ ಸಾಹಿತ್ಯ ಸಮ್ಮೇಳನಆಯೋಜಿಸಲಾಗಿತ್ತು. ನಂತರ 1993, 2007ರಲ್ಲಿ ಸಮ್ಮೇಳನ ನಡೆದಿದೆ. ನಗರದಲ್ಲಿ ನಡೆಯುತ್ತಿರುವ ನಾಲ್ಕನೇ ಸಮ್ಮೇಳನ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.