ಬೆಂಗಳೂರು: ನಟ, ನಿರ್ದೇಶಕ ಮಾಸ್ಟರ್ ಆನಂದ್ ಅವರ ಪುತ್ರಿಯಾದ ಬಾಲನಟಿ ವಂಶಿಕಾ ಹೆಸರಿನಲ್ಲಿ ಜನರನ್ನು ವಂಚಿಸಿರುವ ಆರೋಪದಡಿ ನಿಶಾ ನರಸಪ್ಪ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ವಂಶಿಕಾ ತಾಯಿ ಯಶಸ್ವಿನಿ ಅವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ನಿಶಾ ನರಸಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರ ಯಶಸ್ವಿನಿ ಅವರಿಗೆ ಇನ್‌ಸ್ಟಾಗ್ರಾಂ ಮೂಲಕ ಆರೋಪಿ ನಿಶಾ ಪರಿಚಯವಾಗಿತ್ತು. ಕಾರ್ಯಕ್ರಮವೊಂದಕ್ಕೆ ತಾಯಿ–ಮಗಳನ್ನು ಆರೋಪಿ ಆಹ್ವಾನಿಸಿದ್ದರು. ಇದರಿಂದ ಮತ್ತಷ್ಟು ಹತ್ತಿರವಾಗಿದ್ದರು.’

‘ವಂಶಿಕಾ ಹೆಸರು ಹಾಗೂ ಫೋಟೊಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪಿ, ‘ಮಕ್ಕಳಿಗೆ ಟಿ.ವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಕೊಡಿಸುತ್ತೇನೆ’ ಎಂದು ಜಾಹೀರಾತು ನೀಡುತ್ತಿದ್ದರು. ಫೋಟೊ ಶೂಟ್ ಹೆಸರಿನಲ್ಲಿ ಪೋಷಕರಿಂದ ಹಣ ಪಡೆಯುತ್ತಿದ್ದರು. ನಂತರ, ಯಾವುದೇ ಅವಕಾಶ ಕೊಡಿಸದೇ ಜನರನ್ನು ವಂಚಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಆರೋಪಿ ನಿಶಾ ಕೃತ್ಯ ಇತ್ತೀಚೆಗೆ ಯಶಸ್ವಿನಿ ಅವರಿಗೆ ಗೊತ್ತಾಗಿತ್ತು. ತಮ್ಮ ಮಗಳ ಹೆಸರಿನಲ್ಲಿ ವಂಚನೆಯಾಗುತ್ತಿರುವುದರಿಂದ ಠಾಣೆಗೆ ಬಂದು ದೂರು ನೀಡಿದ್ದಾರೆ. ಆರೋಪಿ ನಿಶಾ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದಾರೆ’ ಎಂದು ಮೂಲಗಳು ಹೇಳಿವೆ.

ಪ್ರತಿದೂರಿನಡಿ ಎನ್‌ಸಿಆರ್: ‘ಯಶಸ್ವಿನಿ ಹಾಗೂ ಇತರರ ವಿರುದ್ಧ ಪ್ರತಿ ದೂರು ನೀಡಿರುವ ನಿಶಾ, ‘ನನ್ನ ಮೇಲೆ ಹಲ್ಲೆ ಮಾಡಲಾಗಿದೆ’ ಎಂದು ದೂರಿದ್ದಾರೆ. ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.