ಅಮೆಜಾನ್ ಆನ್ಲೈನ್ ಶಾಪಿಂಗ್ ಕಂಪನಿ ‘ಅಮೆಜಾನ್ ಕೇರ್ಸ್’ ’ ಎಂಬ ಹೆಸರಿನಲ್ಲಿ ನಿರುದ್ಯೋಗಿಗಳಿಗೆ, ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸ್ವ ಉದ್ಯೋಗ ತರಬೇತಿ ಹಾಗೂ ಆರೋಗ್ಯ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆರೋಗ್ಯ ಮತ್ತು ಸ್ವಚ್ಛತೆ, ಮಹಿಳಾ ಸಬಲೀಕರಣ, ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಗರದ ಕೆ. ಮಲ್ಲಸಂದ್ರ ಹಾಗೂಬೆಸ್ತಮನಹಳ್ಳಿಯಲ್ಲಿನ ಅಮೆಜಾನ್ ಸಮುದಾಯ ಕೇಂದ್ರಗಳಲ್ಲಿ ಆಯೋಜಿಸುತ್ತಾ ಬಂದಿದೆ.

2017ರ ಏಪ್ರಿಲ್ನಲ್ಲಿ ಆರಂಭವಾದ ಅಮೆಜಾನ್ ಕಮ್ಯೂನಿಟಿ ಸೆಂಟರ್ನಲ್ಲಿ ಈ ಕಾರ್ಯಕ್ರಮದಡಿಸ್ಪೋಕನ್ ಇಂಗ್ಲಿಷ್, ಡಿಜಿಟಲ್ ಶಿಕ್ಷಣ, ಲೈಬ್ರೆರಿ, ಕೆರಿಯರ್ ಕೌನ್ಸೆಲಿಂಗ್, ಇ– ಲರ್ನಿಂಗ್ ಪ್ರೋಗ್ರಾಂಗಳ ಬಗ್ಗೆ ಉಚಿತ ತರಗತಿ ನಡೆಸಲಾಗುತ್ತದೆ.

ಉಚಿತ ಆರೋಗ್ಯ ಶಿಬಿರ, ಪ್ರಥಮ ಚಿಕಿತ್ಸೆ, ಪೌಷ್ಟಿಕ ಆಹಾರದ ಬಗ್ಗೆ ತಾಯಂದಿರಿಗೆ ಮಾಹಿತಿ ಒದಗಿಸುವ ಕಾರ್ಯಕ್ರಮಗಳನ್ನು ಆಗಾಗ್ಗೆ ಆಯೋಜಿಸಲಾಗುತ್ತದೆ. ಮಹಿಳೆಯರಿಗೆಟೇಲರಿಂಗ್, ಬ್ಯೂಟಿ ಪಾರ್ಲರ್, ಕಸೂತಿ ಕಲೆ, ಡ್ರೈವಿಂಗ್, ಕ್ಯಾಂಟೀನ್ ಸರ್ವೀಸ್ ಬಗ್ಗೆ ಉಚಿತವಾಗಿ ತರಬೇತಿ ನೀಡುತ್ತದೆ.

ಅಮೆಜಾನ್ ಸಮುದಾಯ ಕೇಂದ್ರದಲ್ಲಿ ಟೇಲರಿಂಗ್ಕಲಿತು ಈಗ ಸ್ವಂತ ಅಂಗಡಿ ತೆರೆದಿದ್ದಾರೆ ಬೆಸ್ತಮನಹಳ್ಳಿಯ ಶೋಭಾಎಸ್.ಎನ್.

ಪತಿಯ ಸಂಬಳದಿಂದ ನಾಲ್ಕು ಜನರ ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತಿತ್ತು. ಶೋಭಾ 10ನೇ ತರಗತಿ ಅಷ್ಟೇ ಓದಿದ್ದರಿಂದ ಯಾವ ಕೆಲಸವೂ ಸಿಗಲಿಲ್ಲ. ಅವರು ಅಮೆಜಾನ್ನ ಈ ಕಾರ್ಯಕ್ರಮದ ಬಗ್ಗೆ ಸ್ನೇಹಿತರ ಮೂಲಕ ತಿಳಿದುಕೊಂಡರು.ಆರು ತಿಂಗಳ ಕೋರ್ಸ್ನಲ್ಲಿ ಟೇಲರಿಂಗ್ ಕಲಿತುಕೊಂಡರು. ಕುಚ್ಚು, ಕಸೂತಿ ಹಾಕುವುದನ್ನೂ ಕಲಿತರು. ಈಗ ತಿಂಗಳಿಗೆ ₹10 ಸಾವಿರ ದುಡಿಯುತ್ತಿದ್ದಾರೆ. ‘ಇದೆಲ್ಲಾ ಸಾಧ್ಯವಾಗಿದ್ದು ಉಚಿತ ತರಬೇತಿಯಿಂದ’ ಎಂದು ವಿನಮ್ರವಾಗಿ ನುಡಿಯುತ್ತಾರೆ.

ಸದ್ಯ ಸ್ವಂತ ಅಂಗಡಿ ಜೊತೆಗೆ ಶೋಭಾ ಸಾಮೇತಹಳ್ಳಿಯಲ್ಲಿ ಅಮೆಜಾನ್ ಸ್ಕಿಲ್ ಡೆವಲಪ್ಮೆಂಟ್ ಕೇಂದ್ರದಲ್ಲಿ 27 ಮಹಿಳೆಯರಿಗೆ ಟೇಲರಿಂಗ್ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಬೆಸ್ತಮನಹಳ್ಳಿ ಹಾಗೂ ಕೆ. ಮಲ್ಲಸಂದ್ರದಲ್ಲಿ ಈ ಕೇಂದ್ರಗಳಿವೆ.

ವಿಳಾಸ–

ಅಮೆಜಾನ್ ಕಮ್ಯೂನಿಟಿ ರಿಸೋರ್ಸ್ ಸೆಂಟರ್, ಮಲ್ಲಸಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ, ಹೊಸಕೋಟೆ

– ಅಮೆಜಾನ್ ಕಮ್ಯೂನಿಟಿ ಸೆಂಟರ್, ಸಮಂದೂರು ಬೆಸ್ತಮನಹಳ್ಳಿ ರಸ್ತೆ, ಬೆಸ್ತಮನಹಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.