ಬೆಂಗಳೂರು: ‘ರಾಜ್ಯದಲ್ಲಿ 700 ರೈತರಿಗೆ ಒಬ್ಬ ಕೃಷಿ ವಿಸ್ತರಣಾ ಕಾರ್ಯಕರ್ತ ಇರಬೇಕಿತ್ತು. ಆದರೆ, 1,600ರಿಂದ 1,700 ರೈತರಿಗೆ ಒಬ್ಬ ಕೃಷಿ ವಿಸ್ತರಣಾ ಕಾರ್ಯಕರ್ತ ಇದ್ದಾರೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ. ಸುರೇಶ ಹೇಳಿದರು.

ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ ರೈತ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆ’ಯಲ್ಲಿ ಡಿಪ್ಲೊಮಾ (ದೇಸಿ) ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

‘ವಿಸ್ತರಣಾ ಕಾರ್ಯಕರ್ತರ ಕೊರತೆ ಸರಿದೂಗಿಸಲು ಸ್ಥಳೀಯಮಟ್ಟದಲ್ಲಿ ರೈತರಿಗೆ ಸದಾಕಾಲ ಸಿಗುವ ಕೃಷಿ ಪರಿಕರ ಮಾರಾಟಗಾರರಿಗೆ ಸೂಕ್ತ ತರಬೇತಿ ನೀಡಬೇಕು. ಆಗ ಸಮಸ್ಯೆ ಸ್ವಲ್ಪ ನೀಗಬಹುದು’ ಎಂದು ಸಲಹೆ ನೀಡಿದರು.

‘ದೇಶದಲ್ಲಿ ಶೇ 55ರಷ್ಟಿರುವ ಕೃಷಿಕರಿಗೆ ಸಕಾಲದಲ್ಲಿ ತಂತ್ರಜ್ಞಾನ ವರ್ಗಾಯಿಸಲು ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ. ಪ್ರಪಂಚದ ವಿವಿಧೆಡೆಯ ಕೃಷಿ ಪ್ರಗತಿಯ ಬಗ್ಗೆ ಸ್ಥಳದಲ್ಲಿಯೇ ತಿಳಿದುಕೊಳ್ಳಲು ಸಾಮಾಜಿಕ ಜಾಲತಾಣಗಳ ಬಳಕೆ ಅನಿವಾರ್ಯ’ ಎಂದು ಹೇಳಿದರು.

ವಿಸ್ತರಣಾ ನಿರ್ದೇಶಕ ಡಾ.ವಿ.ಎಲ್.ಮಧುಪ್ರಸಾದ್ ಮಾತನಾಡಿ, ‘ಕೃಷಿ ಪರಿಕರ ಮಾರಾಟಗಾರರು, ತಮ್ಮ ಪರಿಕರಗಳನ್ನು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುವ ಬದಲು ರೈತರ ಜತೆಗೆ ನೇರ ಸಂಪರ್ಕ ಸಾಧಿಸಬೇಕು. ರೈತರು ಮತ್ತು ಕೃಷಿ ಪರಿಕರಗಳ ಮಾರಾಟಗಾರರ ನಡುವೆ ಸಮನ್ವಯತೆ ಇರಬೇಕು’ ಎಂದು ಹೇಳಿದರು.

ಡಾ.ಕೆ.ಶಿವರಾಮು, ಡಾ.ಬಿ.ಕಲ್ಪನಾ, ಡಾ.ಬನು ದೇಶಪಾಂಡೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.