ಬೆಂಗಳೂರು: ‘ನಶಿಸುತ್ತಿರುವ ಬುಡಕಟ್ಟು ಕಲೆಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಈ ಕುರಿತ ವಿಷಯ ಅಳವಡಿಸಬೇಕು’ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ಹೇಳಿದರು.

ಅಕಾಡೆಮಿಯು ನಳಂದ ನ್ಯಾಷನಲ್ ಕಾಲೇಜ್ ಮತ್ತು ಸಮೃದ್ಧಿ ಸೇವಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ತೊಗಲು ಗೊಂಬೆ ಕಲೆ, ಬಂಜಾರ ಹಚ್ಚೆ ಹಾಗೂ ಹಚ್ಚೆ ಪದಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.

‘ನೂರಾರು ತಳ ಸಮುದಾಯಗಳ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ. ತೊಗಲು ಗೊಂಬೆ ಮತ್ತು ಹಚ್ಚೆಗೆ ಅವಿನಾಭಾವ ಸಂಬಂಧವಿದೆ. ಹಚ್ಚೆಯನ್ನು ಒಮ್ಮೆ ಹಾಕಿದರೆ ಅದು ಸಾಯುವವರೆಗೂ ಇರುತ್ತದೆ. ಹಿಂದಿನ ಕಾಲದಲ್ಲಿ ಹೂವು ಹಾಗೂ ಎಲೆಗಳಿಂದ ಬಣ್ಣವನ್ನು ತಯಾರಿಸಿ, ಹಚ್ಚೆ ಹಾಕುತ್ತಿದ್ದರು. ಆದರೆ, ಈಗ ಹಚ್ಚೆ ಹಾಕಲು ರಾಸಾಯನಿಕ ಬಣ್ಣವನ್ನು ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ಮಾರಕವಾಗಿದೆ’ ಎಂದು ಹೇಳಿದರು.

‘ಬಂಜಾರರ ಕಸೂತಿ ಹಾಗೂ ಇತರೆ ಕಲೆಗಳು ವಿಶ್ವದಲ್ಲಿಯೇ ಶ್ರೀಮಂತವಾಗಿದ್ದು, ಇದನ್ನು ಉಳಿಸಲು ಸಮಾಜದ ಯುವಕರಿಗೆ ಅಕಾಡೆಮಿ ವತಿಯಿಂದ ತರಬೇತಿ ನೀಡಲಾಗುತ್ತಿದೆ. ಇದರಿಂದ ಸ್ವಯಂ ಉದ್ಯೋಗ ಮಾಡಿ, ಆರ್ಥಿಕ ಸ್ವಾವಲಂಬನೆ ಸಾಧಿಸಬಹುದಾಗಿದೆ’ ಎಂದು ತಿಳಿಸಿದರು.

ಕವಿ ವಡ್ಡಗೆರೆ ನಾಗರಾಜಯ್ಯ, ‘ಬಂಜಾರ ಸಮುದಾಯವು ಹಚ್ಚೆ ಮತ್ತು ತೊಗಲು ಗೊಂಬೆಯಾಟವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷ ಬಿ.ಎಚ್ ಮಂಜುನಾಥ್, ನಳಂದ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲೆ ನಾಗರತ್ನಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.