ಬೆಂಗಳೂರು: ‘ಬಂಜಾರ ಸಮುದಾಯದವರನ್ನು ನಿಗಮ ಮಂಡಳಿ, ಅಕಾಡೆಮಿಗಳಿಗೆ ನೇಮಿಸುವ ನಿಟ್ಟಿನಲ್ಲಿ ಚಿಂತಕರ ಚಾವಡಿ ರಚಿಸಲಾಗುವುದು’ ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಎಂ. ಲಮಾಣಿ ಹೇಳಿದರು.

ನಗರದಲ್ಲಿ ಮಂಗಳವಾರ ಬಂಜಾರ ವಿದ್ಯಾರ್ಥಿ ಹಾಗೂ ಇತರೆ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ನಡೆದ ಬಂಜಾರ ಜನಸ್ಪಂದನಾ ಹಾಗೂ ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೆರಿಟ್ ಆಧಾರದ ಮೇಲೆ ಅರ್ಹ ಪ್ರಾಮಾಣಿಕರನ್ನು ನೇಮಿಸುತ್ತೇವೆ. ಬಗರ್ ಹುಕ್ಕುಂ ಸಾಗುವಳಿಗೆ ಕೇಂದ್ರ ಸರ್ಕಾರದಿಂದ ಇರುವ ಅಡೆತಡೆಗಳ ನಿವಾರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಮುಖಂಡರಾದ ಮನೋಹರ್ ಐನಾಪುರ್, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಜಯದೇವ ನಾಯ್ಕ, ಎ.ಆರ್. ಗೋವಿಂದಸ್ವಾಮಿ, ಸುಭಾಷ್ ರಾಥೋಡ್, ಖಂಡೋಬ, ರಾಹುಲ್, ಹನುಮಂತ ನಾಯ್ಕ, ಬಾಬುಹೊನ್ನಾ ನಾಯಕ್, ವಸುಂಧರ ಐನಾಪುರ, ಇದ್ದರು.

ನಿರ್ಣಯಗಳು:

* ಸ್ವಾತಂತ್ರ್ಯ ಬಂದ 76 ವರ್ಷವಾದರೂ ಸಮುದಾಯ ಆರ್ಥಿಕ ಪ್ರಗತಿ ಕಂಡಿಲ್ಲ. ಈ ನಿಟ್ಟಿನಲ್ಲಿ ಬಂಜಾರ ಸಮುದಾಯದ ನಾಯಕರು ಪಕ್ಷಾತೀತವಾಗಿ ಒಂದಾಗಿ ಸಮುದಾಯದ ಪ್ರಗತಿಗೆ ಸಂವಿಧಾನಾತ್ಮಾಕ ನೆಲೆಯಲ್ಲಿ ಕೆಲಸ ನಿರ್ವಹಿಸಬೇಕು.

* ಮೀಸಲಾತಿಗೆ ಅನುಗುಣವಾಗಿ ನಮ್ಮ ಹಕ್ಕನ್ನು ವಿಶ್ವವಿದ್ಯಾಲಯಗಳು, ನಿಗಮ ಮಂಡಳಿಗಳು, ಅಕಾಡೆಮಿಗಳಿಗೆ ರಾಜಕೀಯ ಹಾಗೂ ಇತರೆ ವಲಯಗಳ ಧರ್ಮ ಗುರುಗಳು, ಸಾಹಿತ್ಯ ಹಾಗೂ ಕಲಾ ವಿಭಾಗಗಳ ನಾಯಕರನ್ನು ನಿಗಮ ಮಂಡಳಿ ಅಕಾಡೆಮಿಗಳಿಗೆ ಆಯ್ಕೆ ಮಾಡಬೇಕು.

* ಒಳಮೀಸಲಾತಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗದಂತೆ ಒತ್ತಾಯಿಸಬೇಕು.

* ಬಂಜಾರ ಸಮುದಾಯಕ್ಕೆ ಲೋಕಸಭೆ ಚುನಾವಣೆಯ ನಂತರ ಸಚಿವ ಸ್ಥಾನ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.