ಬೆಂಗಳೂರು: ಮನೆಯೊಂದಕ್ಕೆ ನುಗ್ಗಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಆಕಾಶ್ (27) ಎಂಬುವವರನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕಲಬುರಗಿ ಜಿಲ್ಲೆಯ ಆಕಾಶ್ ಕೆಲ ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ. ಕುಂದಲಹಳ್ಳಿಯಲ್ಲಿ ವಾಸವಿದ್ದ. ಆ್ಯಪ್ ಆಧರಿತ ಆಹಾರ ಪೂರೈಕೆ ಕಂಪನಿಯೊಂದರಲ್ಲಿ ಟೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿದ್ದ’ ಎಂದು ಪೊಲೀಸರು ಹೇಳಿದರು.

‘ಎಚ್‌ಎಎಲ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಮಹಿಳೆ, ಮಾರ್ಚ್ 17ರಂದು ಆ್ಯಪ್ ಮೂಲಕ ಆಹಾರ ಕಾಯ್ದಿಸಿದ್ದರು. ಆಹಾರ ಪೊಟ್ಟಣ ತೆಗೆದುಕೊಂಡು ಆರೋಪಿ ಆಕಾಶ್ ಮನೆ ಬಾಗಿಲಿಗೆ ಬಂದಿದ್ದರು. ಮಹಿಳೆ ಸಹ ಪೊಟ್ಟಣ ಪಡೆಯಲು ಮುಂದಾಗಿದ್ದರು.’

‘ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ನಿಮ್ಮ ಮನೆಯ ಶೌಚಾಲಯ ಬಳಸಬಹುದೆ?’ ಎಂದು ಆಕಾಶ್ ಕೇಳಿದ್ದ. ಅದಕ್ಕೆ ಒಪ್ಪಿದ್ದ ಮಹಿಳೆ, ಮನೆಯೊಳಗೆ ಕರೆದಿದ್ದರು. ಶೌಚಾಲಯ ಬಳಸಿದ್ದ ಆರೋಪಿ, ಮನೆಯಲ್ಲಿ ಯಾರೂ ಇಲ್ಲದನ್ನು ನೋಡಿದ್ದ. ಒಂಟಿಯಾಗಿದ್ದ ಮಹಿಳೆಯ ಕೈ ಹಿಡಿದು ಎಳೆದಾಡಿದ್ದ. ಅಂಗಾಂಗಗಳನ್ನು ಮುಟ್ಟಲು ಯತ್ನಿಸಿದ್ದ. ಮಹಿಳೆ ಕೂಗಾಡುತ್ತಿದ್ದಂತೆ ಸ್ಥಳದಿಂದ ಹೊರಟುಹೋಗಿದ್ದ’ ಎಂದು ಪೊಲೀಸರು ತಿಳಿಸಿದರು.

‘ಘಟನೆ ಬಗ್ಗೆ ಮಹಿಳೆ ದೂರು ನೀಡುತ್ತಿದ್ದಂತೆ, ತನಿಖೆ ಕೈಗೊಂಡು ಆರೋಪಿಯನ್ನು ಸೆರೆಹಿಡಿಯಲಾಗಿದೆ. ಈತನ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.