ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 19 ಕೆರೆಗಳಿಗೆ ಒಳಚರಂಡಿ ನೀರು ಹರಿಯುವುದನ್ನು ತಡೆಯಲು ಬೆಂಗಳೂರು ಜಲಮಂಡಳಿ, ವಿಶ್ವಬ್ಯಾಂಕ್ ನೆರವಿನ ಯೋಜನೆ ರೂಪಿಸಿದೆ.

ಒಳಚರಂಡಿ ನೀರು ಸಂಸ್ಕರಣೆ ಘಟಕಗಳನ್ನು (ಎಸ್ಪಿಟಿ) ಸ್ಥಾಪಿಸುವ ಯೋಜನೆಯನ್ನು ವಿಶ್ವಬ್ಯಾಂಕ್ಗೆ ಸಲ್ಲಿಸಲಾಗಿದ್ದು, ಅದರ ಅನುಮೋದನೆ ಅಂತಿಮ ಹಂತ ತಲುಪಿದೆ. ಒಪ್ಪಿಗೆ ದೊರೆತ ನಂತರ ಒಂದು ವರ್ಷದಲ್ಲಿ ಎಸ್ಟಿಪಿ ಅಳವಡಿಸುವ ಕಾರ್ಯವನ್ನು ಪೂರ್ಣಗೊಳಿಸಲು ಜಲಮಂಡಳಿ ಯೋಚಿಸಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಸೂಚನೆಯಂತೆ, 110 ಹಳ್ಳಿಗಳಲ್ಲಿ ಜಲಮಂಡಳಿ, ಒಳಚರಂಡಿ ಮಾರ್ಗಗಳನ್ನು ‘ಟ್ರಂಕ್ಡ್ ಪೈಪ್ಲೈನ್’ ಮಾದರಿಯಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಒಳಚರಂಡಿ ನೀರು ಹೊರಭಾಗದಲ್ಲಿ ಹರಿಯುವುದಿಲ್ಲ. 38 ಹಳ್ಳಿಗಳು ಹಾಗೂ ಅವುಗಳ ವ್ಯಾಪ್ತಿಯಲ್ಲಿರುವ ಸುಮಾರು 30 ಹೊಸ ಬಡಾವಣೆಗಳಿಂದ ನಿತ್ಯ ಲಕ್ಷಾಂತರ ಲೀಟರ್ ಒಳಚರಂಡಿ ನೀರು ನೇರವಾಗಿ ಕೆರೆಗಳಿಗೆ ಸೇರುತ್ತಿದೆ. ಇದನ್ನು ತಡೆದು, ಸಂಸ್ಕರಿಸಿದ ನೀರನ್ನು ಕೆರೆಗೆ ಹರಿಸಲು 9 ಎಸ್ಟಿಪಿಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಈ ಭಾಗದ ಕೆರೆಗಳು ಹಾಗೂ ಅದರ ನಂತರದ ಕೆರೆಗಳ ಸರಣಿಯ ಕಾಲುವೆಗಳಲ್ಲಿ ಸಂಸ್ಕರಿಸಿದ ನೀರು ಮಾತ್ರ ಹರಿಸಲು ಯೋಜನೆ ರೂಪಿಸಲಾಗಿದೆ.

ಈ ಎಸ್ಟಿಪಿಗಳ ಜೊತೆಗೆ 10 ಮಧ್ಯಂತರ ಒಳಚರಂಡಿ ಪಂಪಿಂಗ್ ಸ್ಟೇಷನ್ಗಳನ್ನೂ (ಐಎಸ್ಪಿಎಸ್) ಸ್ಥಾಪಿಸಲಾಗುತ್ತಿದೆ. ಕೆರೆಗಳ ಬಳಿ ಎಸ್ಟಿಪಿ ಸ್ಥಾಪನೆ ಸಾಧ್ಯವಾಗದ ಪ್ರದೇಶಗಳಲ್ಲಿ ಐಎಸ್ಪಿಎಸ್ ಘಟಕ ಸ್ಥಾಪಿಸಿ, ಅಲ್ಲಿಂದ ಒಳಚರಂಡಿ ನೀರನ್ನು ಎಸ್ಟಿಪಿಗಳಿಗೆ ಪಂಪ್ ಸೇರಿದಂತೆ ಒಟ್ಟಾರೆ ಯೋಜನೆಗೆ ಸುಮಾರು ₹1 ಸಾವಿರ ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ.

‘19 ಕೆರೆಗಳಿಗೆ ಒಳಚರಂಡಿ ನೀರು ಹರಿಯದಂತೆ ಎಸ್ಟಿಪಿ ಹಾಗೂ ಐಎಸ್ಪಿಎಸ್ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ವಿಶ್ವಬ್ಯಾಂಕ್ ನೆರವು ಕೋರಲಾಗಿದ್ದು, ಆಡಳಿತಾತ್ಮಕ ಸಮ್ಮತಿ ದೊರೆತಿದೆ. ಆರ್ಥಿಕ ಅನುಮೋದನೆ ದೊರೆತ ಕೂಡಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಘಟಕಗಳನ್ನು ಸ್ಥಾಪಿಸಲಾಗುತ್ತದೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

‘ಇದೀಗ 38 ಹಳ್ಳಿಗಳ ವ್ಯಾಪ್ತಿಯ ಒಳಚರಂಡಿ ನೀರನ್ನು ಸಂಸ್ಕರಿಸಲು ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ 110 ಹಳ್ಳಿಗಳ ವ್ಯಾಪ್ತಿಯಲ್ಲೂ ಇಂತಹದ್ದೇ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಇದಕ್ಕೆ ಆರ್ಥಿಕ ನೆರವು, ಅನುದಾನದ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದರು.

ಎಲ್ಲ ಕೆರೆಗಳಿಗೆ ಕಲ್ಮಶ ತಡೆ: ರಾಮ್ ಪ್ರಸಾತ್

‘ನಗರದಲ್ಲಿರುವ ಕೆರೆಗಳಿಗೆ ಒಳಚರಂಡಿ ನೀರು ಹರಿಯುತ್ತಿರುವುದು ಬಹುವರ್ಷಗಳ ಸಮಸ್ಯೆ. ಇದನ್ನು ಹಂತಹಂತವಾಗಿ ಕಡಿಮೆ ಮಾಡಲಾಗುತ್ತಿದ್ದು ಮುಂದಿನ ಕೆಲವು ವರ್ಷಗಳಲ್ಲಿ ಯಾವುದೇ ಕೆರೆಗೆ ಒಳಚರಂಡಿ ನೀರು ನೇರವಾಗಿ ಹರಿಯದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಸಂಸ್ಕರಿಸಿದ ನೀರು ಮಾತ್ರ ಕೆರೆಗೆ ಹರಿಯುವಂತೆ ಯೋಚಿಸಲಾಗಿದೆ. ಇದಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು ಕೆರೆಗಳ ಪರಿಸರ ಉಳಿಸುವಲ್ಲಿ ಜಲಮಂಡಳಿ ಪ್ರಯತ್ನಿಸಲಿದೆ’ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹೇಳಿದರು.

ಯಾವ ಹಳ್ಳಿಗಳ ಒಳಚರಂಡಿ ನೀರಿಗೆ ಎಸ್ಟಿಪಿ?

ಕಮ್ಮನಹಳ್ಳಿ ಕಾಳೇನ ಅಗ್ರಹಾರ ಬಸಾಪುರ; ಚಿಕ್ಕತೋಗೂರು ದೊಡ್ಡತೋಗೂರು ಭಾರತೇನ ಅಗ್ರಹಾರ ನಾಗನಾಥಪುರ ಪರಪ್ಪನ ಅಗ್ರಹಾರ; ಕೂಡ್ಲು ಹರಳೂರು ಕಸವನಹಳ್ಳಿ ಕೈಕೊಂಡನಹಳ್ಳಿ ಜುನ್ನಸಂದ್ರ ದೊಡ್ಡಕಲ್ಲಹಳ್ಳಿ; ದೊಡ್ಡಕಲ್ಲಸಂದ್ರ; ಮಲ್ಲಸಂದ್ರ ಜ್ಯುಡಿಷಿಯಲ್ ಲೇಔಟ್; ಹಗದೂರು ವಿಜಯನಗರ ಗಾಂಧಿಪುರ ಚನ್ನಸಂದ್ರ ನಾಗೊಂಡನಹಳ್ಳಿ; ಕಟ್ಟಿಗೇನಹಳ್ಳಿ ಶ್ರೀನಿವಾಸಪುರ; ಯಲ್ಲಹಳ್ಳಿ ಚಂದ್ರಶೇಖರಪುರ ಗೊಟ್ಟಿಗೆರೆ ಪಿಳ್ಳಾಗನಹಳ್ಳಿ; ವರ್ತೂರು ಗುಂಜೂರು ಸೊರಹುಣಸೆ ಬಳಗೆರೆ.

ಒಳಚರಂಡಿ ನೀರು ಸೇರದ ಕೆರೆಗಳು

ಬೇಗೂರು ರಾಯಸಂದ್ರ ಸೌಳ್ ಕೆರೆ ದೊಡ್ಡಕಲ್ಲಸಂದ್ರ ಜೋಗಿಕೆರೆ ಚನ್ನಸಂದ್ರ ಕಟ್ಟಿಗೇನಹಳ್ಳಿ ಕೋಗಿಲು ಪಾಲನಹಳ್ಳಿ ಜಕ್ಕೂರು ಹುಳಿಮಾವು ವರ್ತೂರು ಗೊಟ್ಟಿಗೆರೆ ಅಂಬಲಿಪುರ ಚಿಕ್ಕಬೆಳ್ಳಂದೂರು ತಲಘಟ್ಟಪುರ ಕಮ್ಮನಹಳ್ಳಿ ಹಾರೋಹಳ್ಳಿ ಯಲಹಂಕ ಕೆರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.