ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಂಟಿಸಿ: 840 ಬಸ್‌ಗಳ ಖರೀದಿಗೆ ಒಪ್ಪಿಗೆ

Published 4 ಜುಲೈ 2024, 20:33 IST
Last Updated 4 ಜುಲೈ 2024, 20:33 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ₹363.82 ಕೋಟಿ ವೆಚ್ಚದಲ್ಲಿ 840 ಬಸ್ಸುಗಳನ್ನು ಖರೀದಿಸಲು ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ, ‘ಪ್ರತಿ ಬಸ್ಸಿಗೆ ₹43.35 ಲಕ್ಷದಂತೆ 820 ಬಸ್ಸುಗಳನ್ನು ಖರೀದಿಸಲಾಗುವುದು’ ಎಂದರು.

ಇಂದಿರಾ ಕ್ಯಾಂಟೀನ್‌ಗೆ ಅಡುಗೆ ಉಪಕರಣ

ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ಅಡುಗೆ ಉಪಕರಣಗಳು ಮತ್ತು ಪೀಠೋಪಕರಣ ಖರೀದಿಸಲು ₹84.58 ಕೋಟಿ ಬಿಡುಗಡೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

‘ಬೆಂಗಳೂರು ಮತ್ತು ಇತರ ನಗರಗಳಲ್ಲಿರುವ ಮೊದಲನೇ ಹಂತದ 138 ಇಂದಿರಾ ಕ್ಯಾಂಟೀನ್‌ಗಳಿಗೆ ಹಾಗೂ ಎರಡನೇ ಹಂತದ 186 ಇಂದಿರಾ ಕ್ಯಾಂಟೀನ್‌ಗಳಿಗೆ ಪ್ರಾದೇಶಿಕ ಪದ್ಧತಿಗೆ ಅನುಗುಣವಾಗಿ ಅಡುಗೆ ಸಲಕರಣೆ ಸಾಮಗ್ರಿಗಳನ್ನು ಟೆಂಡರ್‌ ಮೂಲಕ ಖರೀದಿಸಲು ಒಪ್ಪಿಗೆ ನೀಡಲಾಗಿದೆ’ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT