ಆದಿತ್ಯ ಕೆ.ಎ.

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಖಾನ್ ಅವರ ಕೋಟೆಯಾದ ಚಾಮರಾಜಪೇಟೆಗೆ ಲಗ್ಗೆ ಹಾಕಲು ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಕಸರತ್ತು ನಡೆಸುತ್ತಿವೆ.

ಇದೇ ಕ್ಷೇತ್ರದಿಂದ ‘ಹ್ಯಾಟ್ರಿಕ್’ ಜಯ ಸಾಧಿಸಿರುವ ಜಮೀರ್ ಅವರನ್ನು ಮಣಿಸಲು ಬಿಜೆಪಿಯು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಕಣಕ್ಕಿಳಿಸಿದೆ.

ಮೇಲ್ನೋಟಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆಯಂತೆ ಕಂಡುಬಂದರೂ ಜೆಡಿಎಸ್ ಸಹ ‘ಕಾಂಗ್ರೆಸ್ ಕೋಟೆ’ ಕೆಡವಿ ಮತ್ತೆ ವಶಕ್ಕೆ ಪಡೆಯುವ ತವಕದಲ್ಲಿದೆ.

ತಂತ್ರಗಾರಿಕೆಯಲ್ಲಿ ಒಂದು ಹೆಜ್ಜೆ ಮುಂದಿರುವ ಜೆಡಿಎಸ್, ಕಳೆದ ಚುನಾವಣೆಯಲ್ಲಿ ಜಮೀರ್ ಅವರನ್ನು ಗೆಲ್ಲಿಸಲು ಶ್ರಮಿಸಿದ್ದ ಗೋವಿಂದ್ರಾಜ್ ಅವರನ್ನೇ ಕರೆತಂದು ಟಿಕೆಟ್ ನೀಡಿದೆ. ಒಂದುಕಾಲದ ಆಪ್ತ ಜಮೀರ್ ಸೋಲಿಸಲು ಗೋವಿಂದರಾಜ್ ಪಣತೊಟ್ಟಂತೆ ಸಂಚರಿಸುತ್ತಿದ್ದಾರೆ. ಹಳೇ ಗೆಳಯ ಜಮೀರ್ ವಿರುದ್ಧ ಸೇಡು ತೀರಿಸಿಕೊಳ್ಳುವ ಉಮೇದಿನಲ್ಲಿ ಎಚ್.ಡಿ.
ಕುಮಾರಸ್ವಾಮಿ ಇದ್ದಾರೆ. ಕ್ಷೇತ್ರದಲ್ಲಿ ಸವಾಲಿಗೆ ಪ್ರತಿಸವಾಲು ಕಂಡುಬರುತ್ತಿದೆ.

ರಾಜಧಾನಿಯ ಸೆರಗಿನಲ್ಲಿರುವ ಕ್ಷೇತ್ರದಲ್ಲಿ ಕೊಳೆಗೇರಿಗಳು ಸಾಕಷ್ಟಿವೆ. ಅಲ್ಪಸಂಖ್ಯಾತರು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಎಎಪಿಯಲ್ಲಿದ್ದ ಭಾಸ್ಕರ್ರಾವ್ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿಗೆ ಬಂದು ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಇದು ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದವರ ಕೋಪ ತರಿಸಿತ್ತು. ಅದು ಇನ್ನೂ ಶಮನವಾಗಿಲ್ಲ. ಬಿಜೆಪಿಯ ಸ್ಥಳೀಯ ಕಚೇರಿಗೆ ನುಗ್ಗಿ ಗಲಾಟೆ ನಡೆಸಿದ್ದರು. ಭಾಸ್ಕರ್ರಾವ್ ಡಿಸಿಪಿಯಾಗಿದ್ದ ವೇಳೆ ಈ ಭಾಗದಲ್ಲಿ ಕೆಲಸ ಮಾಡಿದ್ದರು. ಅವರಿಗೆ ಕ್ಷೇತ್ರದ ಒಳನೋಟದ ಅರಿವಿದೆ.

‘ಕ್ಷೇತ್ರಕ್ಕೆ ಅನುದಾನ ಹರಿದು ಬಂದಿದೆ. ಆದರೆ, ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಕ್ಷೇತ್ರದಲ್ಲಿ ಬದಲಾವಣೆ ತರುತ್ತೇನೆ’ ಎನ್ನುತ್ತಲೇ ಭಾಸ್ಕರ್ ರಾವ್ ಸಂಚಲನ ಸೃಷ್ಟಿಸಿದ್ದಾರೆ.

‘ಐದು ವರ್ಷವೂ ನಿಮ್ಮ ಜೊತೆಗಿದ್ದೇನೆ. ಚುನಾವಣೆ ಬಂದಾಗ ಬರುವ ವ್ಯಕ್ತಿ ನಾನಲ್ಲ’ ಎಂದು ಹೇಳುವ ಮೂಲಕ ಜಮೀರ್ ಭಾವನಾತ್ಮಕವಾಗಿ ಮತ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

2008, 2013ರ ಚುನಾವಣೆಯಲ್ಲಿಜಮೀರ್ ಅಹಮದ್ ಜೆಡಿಎಸ್ನಿಂದ ಸ್ಪರ್ಧಿಸಿ ಜಯಿಸಿದ್ದರು. 2018ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದರು.

ಕೋವಿಡ್–19 ವೇಳೆ ಕ್ಷೇತ್ರದ ಜನರು ಸಂಕಷ್ಟ ಎದುರಿಸಿದ್ದರು. ಜನರ ನೆರವಿಗೆ ಬಂದವರಿಗೆ ಹೆಚ್ಚು ವರವಾಗುವ ಸಾಧ್ಯತೆಯಿದೆ ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯವಾಗಿದೆ.

ಇಲ್ಲೂ ಕಣದಲ್ಲಿ 12 ಮಂದಿ ಇದ್ದಾರೆ. ಆಮ್ ಆದ್ಮಿ ಪಕ್ಷದಿಂದ ಜಗದೀಶ್ ಚಂದ್ರ, ಬಹುಜನ ಸಮಾಜ ಪಕ್ಷದಿಂದ ನರಸಿಂಹಮೂರ್ತಿ ಸ್ಪರ್ಧಿಸಿದ್ದಾರೆ. ಪಕ್ಷೇತರರು ಮತ ವಿಭಜನೆ ಮಾಡುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.