ಬೆಂಗಳೂರು: ಪ್ರತಿಷ್ಠಿತ ಐಬಿಎಂ ಕಂಪನಿಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ನಗರದ ಯುವತಿಯೊಬ್ಬರಿಂದ ₹ 31.90 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೈಕೊ ಲೇಔಟ್ನಲ್ಲಿ ವಾಸವಿರುವ 29 ವರ್ಷದ ಯುವತಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ
ಗಳಾದ ರಮೇಶ್, ಪವನ್, ಗೌರವ್ ಹಾಗೂ ಅಭಿಮನ್ಯು ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೆಲಸ ಹುಡುಕುತ್ತಿದ್ದ ಯುವತಿ, ನೌಕರಿ ಡಾಟ್ ಕಾಮ್ ಜಾಲತಾಣದಲ್ಲಿ 2019ರಲ್ಲಿ ವೈಯಕ್ತಿಕ ವಿವರವುಳ್ಳ ರೆಸ್ಯುಮೆ ಅಪ್ಲೋಡ್ ಮಾಡಿದ್ದರು. ಅದರ ಮಾಹಿತಿ ತಿಳಿದುಕೊಂಡಿದ್ದ ಆರೋಪಿಗಳು, ಯುವತಿಗೆ ಕರೆ ಮಾಡಿದ್ದರು. ‘ನಿಮ್ಮ ಅರ್ಹತೆಗೆ ತಕ್ಕಂತೆ ಐಬಿಎಂ ಕಂಪನಿಯಲ್ಲಿ ಕೆಲಸ ಖಾಲಿ ಇದೆ. ವಾರ್ಷಿಕ ₹ 14 ಲಕ್ಷ ಸಂಬಳ. ಕೆಲಸ ಸಿಗಬೇಕಾದರೆ ಹಣ ಖರ್ಚಾಗುತ್ತದೆ’ ಎಂದಿದ್ದರು.’

‘ಆರೋಪಿಗಳ ಮಾತು ನಂಬಿದ್ದ ಯುವತಿ, ಹಂತ ಹಂತವಾಗಿ ₹ 31.90 ಲಕ್ಷ ನೀಡಿದ್ದರು. ಅದಾದ ನಂತರ ಆರೋಪಿಗಳು ಯಾವುದೇ ಕೆಲಸ ಕೊಡಿಸಿಲ್ಲ. ಹಣವನ್ನೂ ವಾಪಸು ನೀಡಿಲ್ಲ. ಅದರಿಂದ ನೊಂದ ಯುವತಿ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದೂ ಮೂಲಗಳುತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.