ಬೆಂಗಳೂರು: ಅಂಚೆ ಕಚೇರಿಗಳಲ್ಲಿ ಸೇವಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಸಂಜೆ 5 ಗಂಟೆಗೆ ಕಚೇರಿ ಮುಕ್ತಾಯವಾಗುತ್ತಿದ್ದರೂ ನಗದು ಮತ್ತು ನಗದೇತರ ವ್ಯವಹಾರಗಳು ಮಧ್ಯಾಹ್ನ 3 ಗಂಟೆಯ ಒಳಗೆ ಗ್ರಾಹಕರು ಮುಗಿಸಬೇಕಿತ್ತು. ನಗದು ವ್ಯವಹಾರವನ್ನು ಕಚೇರಿ ಮುಕ್ತಾಯಕ್ಕಿಂತ ಅರ್ಧ ಗಂಟೆ ಮೊದಲಿನ ವರೆಗೆ (ಸಂಜೆ 4.30ರವರೆಗೆ) ವಿಸ್ತರಿಸಲಾಗಿದೆ. ರಿಜಿಸ್ಟರ್ಡ್ ಪೋಸ್ಟ್, ಸ್ಪೀಡ್ ಪೋಸ್ಟ್, ಇಎಂಒ, ಐಪಿಒ, ಇ–ಮೇಮೆಂಟ್, ಬಿಲ್ ಪಾವತಿ, ಆಧಾರ್, ಸಿಎಸ್‌ಸಿ ವಹಿವಾಟು, ಪಿಎಲ್‌ಐ, ಆರ್‌ಪಿಎಲ್‌ಐ, ಅಂಚೆ ಚೀಟಿ, ಲೇಖನ ಸಾಮಗ್ರಿ ಮಾರಾಟ ಈ ಸಮಯದಲ್ಲಿ ನಡೆಯಲಿದೆ.

ನಗದೇತರ ವ್ಯವಹಾರಗಳಾದ ಉಲ್ಲೇಖ, ವಿಚಾರಣೆ, ಎಟಿಂಎಂ ಕಾರ್ಡ್ ವಿತರಣೆ, ಚೆಕ್‌ಬುಕ್ ವಿತರಣೆ, ಪ್ಯಾನ್, ಆಧಾರ್, ಮೊಬೈಲ್ ಸಂಖ್ಯೆ, ವಿಳಾಸ ನವೀಕರಣ, ಇತರ ಸೌಲಭ್ಯಗಳನ್ನು ಪಡೆಯಲು ಕಚೇರಿ ಮುಕ್ತಾಯದವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅಂಚೆ ಕಚೇರಿ ಬೆಂಗಳೂರು ಪಶ್ಚಿಮ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.