ಬೆಂಗಳೂರು: ಸಿನಿಮಾವೊಂದರ ಯಶಸ್ಸು ಸಂಭ್ರಮಿಸಲು ಮುಂಜಾನೆವರೆಗೆ ಪಬ್ನಲ್ಲಿ ಅವಕಾಶ ಮಾಡಿಕೊಟ್ಟ ಆರೋಪದ ಮೇರೆಗೆ ಪಬ್ನ ಮಾಲೀಕ ಸೇರಿದಂತೆ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಯಶವಂತಪುರದ ಒರಾಯನ್ ಮಾಲ್ ಎದುರಿನ ಜೆಟ್ಲ್ಯಾಗ್ ಪಬ್ನ ಮಾಲೀಕರಾದ ಶಶಿರೇಖಾ ಜಗದೀಶ್ ಮತ್ತು ಪಬ್ನ ವ್ಯವಸ್ಥಾಪಕ ಪ್ರಶಾಂತ್ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಬ್ನ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ಕೊಡಲಾಗಿದೆ ಎಂದು ಪೊಲೀಸರು ಹೇಳಿದರು.

ಪಾರ್ಟಿಯಲ್ಲಿ ಸಿನಿಮಾ ನಟ– ನಟಿಯರು ಭಾಗಿ: ಪಾರ್ಟಿಯಲ್ಲಿ ಚಿತ್ರರಂಗದ ನಟ, ನಟಿಯರು, ನಿರ್ಮಾಪಕರು ಪಾಲ್ಗೊಂಡಿದ್ದರು. ಜ.3ರಂದು ರಾತ್ರಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ರಾತ್ರಿ 8 ಗಂಟೆಗೆ ಆರಂಭವಾದ ಪಾರ್ಟಿ ಜ.4ರ ಮುಂಜಾನೆ 3.30ರವರೆಗೆ ನಡೆದಿತ್ತು. ಈ ವೇಳೆ ಪಾರ್ಟಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಮುಂಜಾನೆವರೆಗೆ ಮದ್ಯ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 12.45ಕ್ಕೆ ಬೀಟ್ನಲ್ಲಿದ್ದ ಪಿಎಸ್ಐ ಹಾಗೂ ಹೊಯ್ಸಳ ಸಿಬ್ಬಂದಿ ಪಬ್ಗೆ ಭೇಟಿ ನೀಡಿ ಪಬ್ ಬಂದ್ ಮಾಡುವಂತೆ ಸೂಚಿಸಿ ತೆರಳಿದ್ದರು. ಆದರೂ ಮುಂಜಾನೆ ವರೆಗೂ ಪಾರ್ಟಿ ನಡೆದಿತ್ತು ಎಂದು ಮೂಲಗಳು ಹೇಳಿವೆ.

‘ಮುಂಜಾನೆವರೆಗೂ ಪಬ್ ಕಾರ್ಯ ನಿರ್ವಹಿಸಿದೆ. ಕರ್ತವ್ಯಕ್ಕೆ ನಿಯೋಜಿಸಿದ್ದ ಬೀಟ್ ಸಿಬ್ಬಂದಿ ಹಾಗೂ ಪಿಎಸ್ಐ ವಿರುದ್ಧವೂ ತನಿಖೆಗೆ ಸೂಚಿಸಲಾಗಿದೆ. ಒಂದುವೇಳೆ ಕರ್ತವ್ಯ ಲೋಪ ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಆಗಿರುವ ಮಾಹಿತಿ ಇಲ್ಲ. ಬೆಳಿಗ್ಗೆವರೆಗೂ ಮದ್ಯ ಪೂರೈಕೆ ಮಾಡಲಾಗಿದೆ. ಅವಧಿ ಮೀರಿ ಪಬ್ ಕಾರ್ಯಾಚರಣೆ ನಡೆಸಿದ ಆರೋಪದ ಮೇರೆಗೆ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಎಂದು ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.