ಬೆಂಗಳೂರು: ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿರುವ ಹೈಮಾಸ್ಟ್ ವಿದ್ಯುತ್ ದೀಪ ಕಂಬಕ್ಕೆ ಕಟ್ಟಲಾಗಿದ್ದ ಹಸಿರು ಧ್ವಜಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ, ಪೊಲೀಸರು ಧ್ವಜವನ್ನು ತೆರವುಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಧ್ವಜದ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಹಲವರು, ‘ಹಸಿರು ಧ್ವಜವನ್ನು ತೆಗೆಸುವ ತಾಕತ್ ನಿಮಗೆ ಇಲ್ಲವೆ ?’ ಎಂದು ಪ್ರಶ್ನಿಸಿದ್ದರು.

ವಿಕಾಸ್ ವಿಕ್ಕಿ, ‘ಈ ಧ್ವಜ ಯಾವ ಧರ್ಮದ್ದು ? ‘ಕೈ’ ನಾಯಕರು ಉತ್ತರಿಸಬೇಕು. ಹಿಂದೂ ಗ್ರಾಮಸ್ಥರ ಮೇಲೆ ಮಾತ್ರ ನಿಮ್ಮ ಅಟ್ಟಹಾಸವೆ?’ ಪೋಸ್ಟ್ ಪ್ರಕಟಿಸಿದ್ದರು. ಇದನ್ನೇ ಬಿಜೆಪಿ ಮುಖಂಡರು, ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದರು.
ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಹೋಗಿದ್ದ ಪೊಲೀಸರು, ಹಸಿರು ಧ್ವಜವನ್ನು ತೆರವುಗೊಳಿಸಿದರು.

ಹಳೇ ಫೋಟೊ ಪೋಸ್ಟ್: ‘ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿರುವ ಜಗಜೀವನ್‌ರಾಮ್ ನಗರ ಠಾಣೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಸಿರು ಧ್ವಜ ಹಾರಿಸಲಾಗಿದೆ’ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಮಂಗಳವಾರ ಪೋಸ್ಟ್ ಪ್ರಕಟಿಸಿದ್ದರು.

ಪರಿಶೀಲನೆ ನಡೆಸಿದ ಪೊಲೀಸರು, ‘ಇದೊಂದು ಹಳೇ ಫೋಟೊ. ಸ್ಥಳದಲ್ಲಿ ಯಾವುದೇ ಧ್ವಜವಿಲ್ಲ. ಶಾಂತಿಗೆ ಧಕ್ಕೆ ತರಲು ಕಿಡಿಗೇಡಿಗಳು ಈ ರೀತಿ ಪೋಸ್ಟ್ ಪ್ರಕಟಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.