ಬೆಂಗಳೂರು: ನಗರದಲ್ಲಿ ಹೊಸದಾಗಿ ನಿರ್ಮಾಣವಾಗುವ ಸಣ್ಣ ಬಡಾವಣೆಗಳು, ಚಿಕ್ಕ ಅಪಾರ್ಟ್ಮೆಂಟ್, ದೊಡ್ಡದಾದ ವೈಯಕ್ತಿಕ ಮನೆಗಳಲ್ಲೂ ‘ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಮರುಬಳಕೆ’ ಮಾಡುವುದನ್ನು ಕಡ್ಡಾಯಗೊಳಿಸಲು ಬೆಂಗಳೂರು ಜಲಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಮುಂದಾಗಿದೆ.

2,400 ಚದರ ಅಡಿ ವಿಸ್ತೀರ್ಣ ಮತ್ತು ಅದಕ್ಕಿಂತ ದೊಡ್ಡದಾದ ವೈಯಕ್ತಿಕ ಮನೆಗಳು, ಸಣ್ಣ ಅಪಾರ್ಟ್ಮೆಂಟ್ಗಳು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಖಾಸಗಿಯವರು ನಿರ್ಮಿಸಿರುವ ಚಿಕ್ಕ ಬಡಾವಣೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಿಸಿ, ಮರು ಬಳಕೆಯನ್ನು ಕಡ್ಡಾಯಗೊಳಿಸಲು ಇತ್ತೀಚೆಗೆ ನಡೆದ ಜಲ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಪ್ರಸ್ತುತ 120 ಮನೆಗಳಿರುವ ಅಪಾರ್ಟ್ಮೆಂಟ್ಗಳಿಗೆ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್ಟಿಪಿ) ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಅದರ ಮುಂದುವರಿದ ಭಾಗವಾಗಿ ಈ ನಿಯಮವನ್ನು ಜಾರಿಗೆ ತರಲು ಜಲಮಂಡಳಿ ಸಿದ್ಧತೆ ನಡೆಸಿದೆ.

‘ಈ ವಿಷಯಕ್ಕೆ ಸಂಬಂಧಿಸಿದಂತೆ ಜಲಮಂಡಳಿ ಅಧಿಕಾರಿಗಳು, ತಜ್ಞರೊಂದಿಗೆ ಮೂರ್ನಾಲ್ಕು ಸುತ್ತಿನ ಸಭೆಗಳನ್ನು ನಡೆಸಿ, ಈ ನಿರ್ಧಾರ ಕೈಗೊಳ್ಳಲಾಗಿದೆ. ಮಂಡಳಿಯ ಶಿಫಾರಸುಗಳನ್ನು ಒಳಗೊಂಡ ಪ್ರಸ್ತಾವವನ್ನು ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ, ನಿಯಮ ರೂಪಿಸಲು ಮನವಿ ಮಾಡಲಾಗುವುದು’ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ಎದುರಾಗಬಹುದಾದ ನೀರಿನ ಕೊರತೆಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಹಾಗೂ ಜಲಸಂರಕ್ಷಣೆ ಮತ್ತು ಸುಸ್ಥಿರ ನೀರು ನಿರ್ವಹಣೆಯ ಉದ್ದೇಶದಿಂದ ತ್ಯಾಜ್ಯ ನೀರು(ಬೂದು ನೀರು) ಸಂಸ್ಕರಿಸಿ ಮರುಬಳಸುವುದನ್ನು ಹೊಸ ಮನೆಗಳಿಗೆ ಕಡ್ಡಾಯಗೊಳಿಸಲು ಮಂಡಳಿ ತೀರ್ಮಾನಿಸಿದೆ. ಸಿಂಗಪುರ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಈ ನೀತಿ ಜಾರಿಯಲ್ಲಿದೆ. ನಮ್ಮ ದೇಶದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದೇವೆ’ ಎಂದು ಅವರು ತಿಳಿಸಿದರು.

ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವುದರಿಂದ, ಕಾವೇರಿ ನೀರಿನ ಬಳಕೆಯನ್ನು ಕಡಿತಗೊಳಿಸಬಹುದು. ಒಳಚರಂಡಿಗೆ ಹರಿಯುವ ತ್ಯಾಜ್ಯ ನೀರಿನ ಪ್ರಮಾಣವನ್ನೂ ತಗ್ಗಿಸಬಹುದು ಎಂಬುದು ಅವರ ಅಭಿಪ್ರಾಯ.ವೈಯಕ್ತಿಕ ಮನೆಗಳಿಗೆ ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಮರುಬಳಕೆ ಕಡ್ಡಾಯಗೊಳಿಸುವುದರಿಂದ ಒಳಚರಂಡಿಯ ಮೇಲಾಗುವ ಒತ್ತಡ ತಪ್ಪಿಸಬಹುದು. ನೀರನ್ನೂ ಉಳಿತಾಯ ಮಾಡಬಹುದು. –.ರಾಮ್ ಪ್ರಸಾತ್ ಮನೋಹರ್ಅಧ್ಯಕ್ಷ ಬೆಂಗಳೂರು ಜಲಮಂಡಳಿ

ವೈಯಕ್ತಿಕ ಮನೆಗಳಿಗೆ ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಮರುಬಳಕೆ ಕಡ್ಡಾಯಗೊಳಿಸುವುದರಿಂದ ಒಳಚರಂಡಿಯ ಮೇಲಾಗುವ ಒತ್ತಡ ತಪ್ಪಿಸಬಹುದು. ನೀರನ್ನೂ ಉಳಿತಾಯ ಮಾಡಬಹುದು.
–.ರಾಮ್ ಪ್ರಸಾತ್ ಮನೋಹರ್ಅಧ್ಯಕ್ಷ ಬೆಂಗಳೂರು ಜಲಮಂಡಳಿ

ಬೂದು ನೀರು ಬಳಕೆ ಹೇಗೆ ?

ಮನೆಯಲ್ಲಿ ಶೌಚಗೃಹದ ನೀರು ಮತ್ತು ನಿತ್ಯ ಮನೆಯಲ್ಲಿ ಬಳಸುವ ನೀರು (ಗ್ರೇ ವಾಟರ್ ಅಥವಾ ಬೂದು ನೀರು) ಪ್ರತ್ಯೇಕವಾಗಿ ಹರಿಯುವಂತೆ ಕೊಳವೆಗಳನ್ನು ಅಳವಡಿಸಬೇಕು. ಶೌಚಗೃಹದ ನೀರನ್ನು ಒಳಚರಂಡಿಗೆ ಸಂಪರ್ಕ ನೀಡಿ ಬೂದು ನೀರನ್ನು ಯಂತ್ರದ ಮೂಲಕ ಶುದ್ಧೀಕರಿಸಿ ಸಂಗ್ರಹಿಸಲು ಟ್ಯಾಂಕ್ ವ್ಯವಸ್ಥೆ ಮಾಡಬೇಕು. ತ್ಯಾಜ್ಯ ನೀರು ಸಂಸ್ಕರಿಸುವ ಚಿಕ್ಕ ಯಂತ್ರಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಸಂಸ್ಕರಿತ ನೀರನ್ನು ಶೌಚಗೃಹ ಕೈ ತೋಟಗಳಿಗೆ ವಾಹನಗಳ ಸ್ವಚ್ಛತೆಯಂತಹ ಕೆಲಸಗಳಿಗೆ ಬಳಸಬಹುದು. ಹೆಚ್ಚಾದ ನೀರನ್ನು ಇಂಗು ಗುಂಡಿ ಮೂಲಕ ಭೂಮಿಯಲ್ಲೂ ಇಂಗಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.